ಜೂನಿಯರ್ ಕ್ರೇಜಿಸ್ಟಾರ್ ಅಭಿನಯದ ‘ಮುಗಿಲ್ಪೇಟೆ’ ಮೊಹಬತ್ಗೆ ಚಿತ್ರಪ್ರೇಮಿಗಳು ಫಿದಾ ಆಗಿದ್ದಾರೆ.. ಮನು ಮೂರನೇ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಮನು ಅಭಿನಯಕ್ಕೆ ಪುಲ್ ಮಾರ್ಕ್ಸ್ ನೀಡಿದ್ದಾರೆ..ಅದರೆ ಜೂ. ಕ್ರೇಜಿಸ್ಟಾರ್ ಫರ್ಪಾರ್ಮೆನ್ಸ್ಗೆ ಕರುನಾಡ ಕ್ರೇಜಿಸ್ಟಾರ್ ಎಷ್ಟು ಮಾರ್ಕ್ಸ್ ಕೊಟ್ರು.. ‘ಮುಗಿಲ್ ಪೇಟೆ’ ಚಿತ್ರದ ಬಗ್ಗೆ ಮಲ್ಲನ ಮಾತೇನು ಅನ್ನೋದ ನೋಡಣ ಬನ್ನಿ.
‘ಮುಗಿಲ್ಪೇಟೆ’ ಮನು ರವಿಚಂದ್ರನ್ ಬಾರಿ ನಿರೀಕ್ಷೆ ಇಟ್ಟು ಕೊಂಡಿದ್ದ ಸಿನಿಮಾ. ಒಂದೊಳ್ಳೆ ಕಂಟೆಂಟ್ ಇಟ್ಕೊಂಡ್ ಇಷ್ಟಪಟ್ಟು ಎಫರ್ಟ್ ಹಾಕಿ ಮಾಡಿದ ಸಿನಿಮಾವನ್ನ ಕನ್ನಡಿಗರು ಕಾಪಡೇ ಕಾಪಾಡುತ್ತಾರೆ. ಅದೇ ರೀತಿ ಜೂ.ಕ್ರೇಜಿ ಸ್ಟಾರ್ ಪ್ರೀತಿಯ ಪಯಣದ ಮುಗಿಲ್ ಪೇಟೆ ಸಿನಿಮಾವನ್ನು ಸಿನಿ ರಸಿಕರು ಅಪ್ಪಿ ಒಪ್ಪಿದ್ದಾರೆ.
ಮುಗಿಲ್ ಪೇಟೆ ಸಿನಿಮಾ ನಿನ್ನೆ ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ.. ಮಗನ ಸಿನಿಮಾ ಬಗ್ಗೆ ಒಳ್ಳೆ ರಿವ್ಯೂ ಸಿಕ್ಕ ಕೂಡಲೇ ಕ್ರೇಜಿ ಸ್ಟಾರ್ ತಡ ಮಅಡೊದು ಯಾಕೆ ಅಂತ ನಿನ್ನೆಯೇ ಹೋಗಿ ಸಿನಿಮಾ ನೋಡಿದ್ದಾರೆ.. ಅಷ್ಟೇ ಅಲ್ಲ ಫಸ್ಟ್ ಟೈಂ ಕ್ರೇಜಿಸ್ಟಾರ್ ಜೂ.. ಕ್ರೇಜಿಸ್ಟಾರ್ ಅಭಿನಯವನ್ನ ಒಪ್ಪಿದ್ದಾರೆ..ಅಲ್ಲದೆ‘ಮುಗಿಲ್ಪೇಟೆ ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದಾರೆ.
ಮುಗಿಲ್ ಪೇಟೆ ಚಿತ್ರದ ಲವ್, ಮಂದರ್ ಸೆಂಟಿಮೆಂಟ್, ಕಾಮಿಡಿ, ಸಂಗೀತ ಎಲ್ಲವನ್ನು ಮೆಚ್ಚಿರುವ ಪ್ರೇಮಲೋಕದ ಜನಕ, ಮಗನ ಆಕ್ಷನ್ ಎಪಿಸೋಡ್ ಫಿದಾ ಆಗಿದ್ದಾರೆ..ಅಷ್ಟೇ ಅಲ್ಲ ಮಗ ಇಂಡಸ್ಟ್ರಿಯಲ್ಲಿ ನನ್ನ ಜಾಗ ತುಂಭ್ತಾನೆ ಅನ್ನೋ ನಂಬಿಕೆ ಇದೆ ಅಂತ ಧೈರ್ಯವಾಗಿ ಮಗನ ಫರ್ಫಾರ್ಮೆನ್ಸ್ಗೆ ಬೆನ್ನು ತಟ್ಟಿದ್ದಾರೆ.
ಮುಗಿಲ್ ಪೇಟೆ ಸಿನಿಮಾ ಬ ಗ್ಗೆ ಮುಕ್ತವಾಗಿ ಮಾತನಾಡಿದ ಕ್ರೇಜಿಸ್ಟಾರ್ ಮಗನ ಕಾಲ್ ಶೀಟ್ ಕೇಳೋಕೆ ರೆಡಿಯಾಗಿದ್ದಾರೆ.. ಮಗ ಯಾವಗ್ ಬಂದ್ರುಉ ನೂರು ಕತೆ ಹೇಳೋಕೆ ನಾನ್ ರೆಡಿ ಅನ್ನೋ ರವಿಮಾಮ, ಇನ್ನು ಶುರುವಾಗದೆ ನಿಂತಿರುವ ರಣಧೀರ ಟೈಟಲ್ನಲ್ಲೇ ಮಗನಿಗೆ ಸಿನಿಮಾ ಮಾಡ್ತಿನಿ ಅಂತ ಚಿತ್ರಪ್ರೇಮಿಗಳೇ ತಂಡದ ಜೊತೆ ಹೇಳಿದ್ದಾರೆ.
ಒಟ್ಟಿನಲ್ಲಿ ಮಗನ ಮೂರನೇ ಚಿತ್ರಕ್ಕೆ ಕ್ರೇಜಿಸ್ಟಾರ್ ಬೆನ್ನು ತಟ್ಟಿದ್ದಾರೆ..ಮನುನ 2ನೇ ಸಿನಿಮಾವನ್ನೆ ನೋಡದ ಕ್ರೇಜಿಸ್ಟಾರ್ ಮುಗಿಲ್ ಪೇಟೆ ಸಿನಿಮಾ ನೋಡಿದ್ದಾರೆ ಅಂದ್ರೆ ಚಿತ್ರದಲ್ಲಿ ಮ್ಯಾಟ್ರು ಮೀಟ್ರು 2 ಇರುತ್ತೆ ಅಂತ ಕ್ರೇಜಿಸ್ಟಾರ್ ಅಭಿಮಾನಿಗಳು ಮಾತಾಡ್ತಿದ್ದಾರೆ.