ಮಗಳಿಗೆ ಹೆರಿಗೆ -ಬಳ್ಳಾರಿಗೆ ಹೋಗಲು ಅನುಮತಿ ಕೊಡಿ ಎಂದು ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್​​ಗೆ ಮತ್ತೊಮ್ಮೆ ಅರ್ಜಿ | Former Mining baron Janardhana Reddy wants to go his hometown Bellary pleads supreme court


Janardhana Reddy: ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್‌ ನಾಳೆ ಆದೇಶ ಪ್ರಕಟಿಸಲಿದೆ. ನಾಳೆ ಶುಕ್ರವಾರ ಮೊದಲ ಪ್ರಕರಣವಾಗಿ ರೆಡ್ಡಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ.

ಮಗಳಿಗೆ ಹೆರಿಗೆ -ಬಳ್ಳಾರಿಗೆ ಹೋಗಲು ಅನುಮತಿ ಕೊಡಿ ಎಂದು ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್​​ಗೆ ಮತ್ತೊಮ್ಮೆ ಅರ್ಜಿ

ಮಗಳಿಗೆ ಹೆರಿಗೆ -ಬಳ್ಳಾರಿಗೆ ಹೋಗಲು ಅನುಮತಿ ಕೊಡಿ ಎಂದು ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್​​ಗೆ ಮತ್ತೊಮ್ಮೆ ಅರ್ಜಿ

TV9kannada Web Team

| Edited By: sadhu srinath

Sep 29, 2022 | 4:57 PM
ನವದೆಹಲಿ: ತಮ್ಮ ಜಿಲ್ಲೆ ಬಳ್ಳಾರಿಗೆ (Hometown Bellary) ತೆರಳಲು ಅನುಮತಿ ನೀಡುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಸುಪ್ರೀಂ ಕೋರ್ಟ್​​ಗೆ (Supreme Court) ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪುತ್ರಿಗೆ ಕೆಲ ದಿನಗಳಲ್ಲಿ ಹೆರಿಗೆಯಾಗುವ (Pregant) ಹಿನ್ನೆಲೆಯಲ್ಲಿ ಅನುಮತಿ ನೀಡಲು ಜನಾರ್ದನ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.

ನ್ಯಾ. ಎಂ.ಆರ್‌. ಶಾ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಜನಾರ್ದನ ರೆಡ್ಡಿ 2 ತಿಂಗಳು ಬಳ್ಳಾರಿಗೆ ತೆರಳುವುದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿದೆ. ಹಾಗಾಗಿ ಒಂದು ತಿಂಗಳಾದ್ರೂ ಬಳ್ಳಾರಿಗೆ ತೆರಳಲು ಅವಕಾಶ ನೀಡುವಂತೆ ಜನಾರ್ದನ ರೆಡ್ಡಿ ತಮ್ಮ ಪರ ವಕೀಲರಿಂದ ಮನವಿ ಮಾಡಿದ್ದಾರೆ. ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್‌ ನಾಳೆ ಆದೇಶ ಪ್ರಕಟಿಸಲಿದೆ. ನಾಳೆ ಶುಕ್ರವಾರ ಮೊದಲ ಪ್ರಕರಣವಾಗಿ ರೆಡ್ಡಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಲಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.