ಮಗಳು ಲವ್​ ಮಾಡಿದ್ಲು ಅಂತ ಸಿಟ್ಟಾದ ಮಲ್ಟಿ ಟ್ಯಾಲೆಂಟೆಡ್​ ಅಪ್ಪ ಮಾಡಿದ್ದೇನು ಗೊತ್ತಾ?


ಬೆಂಗಳೂರು: ಮಗಳನ್ನ ಲವ್ ಮಾಡಿದ ಅಂತಾ ಪ್ರೇಮಿಯನ್ನ ಮರ್ಡರ್ ಮಾಡಿ ಕತೆ ಕಟ್ಟಿದ್ದ ಮಲ್ಟಿ ಟ್ಯಾಲೆಂಟೆಡ್​ ಆರೋಪಿಯನ್ನು ಖಾಕಿ ಪಡೆ ಬಂಧಿಸಿದೆ.

ನಡೆದದ್ದೇನು?
ಕೊಲೆಯಾದ ಮೃತ ಯುವಕ ನಿವೇಶ್​(19) ವಿನೋಬನಗರ ನಿವಾಸಿ ನಾರಾಯಣ್ ​ ಮಗಳನ್ನು ಮಗಳನ್ನ ಪ್ರೀತಿಸುತ್ತಿದ್ದರಂತೆ. ಒಂದು ದಿನ ಆರೋಪಿ ನಾರಾಯಣ್​ ಮನೆಯಲ್ಲಿರದಿದ್ದಾಗ ಮಗಳು ತನ್ನ ಲವರ್​ನನ್ನು ಮನೆಗೆ ಕರೆಸಿಕೊಂಡಿದ್ದಾರೆ. ಈ ವೇಳೆ ಅಚಾನಕ್ಕಾಗಿ ಮನೆಗೆ ಆಗಮಿಸಿದ ಆರೋಪಿ ನಾರಾಯಣ್​ ಮನೆಯಲ್ಲಿ ಮಗಳು ಪ್ರಿಯಕರನ ಜೊತೆ ಇರೋದನ್ನು ಕಂಡಿದ್ದಾರೆ. ಇದರಿಂದ ಕೋಪಗೊಂಡು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ನಿವೇಶ್​ ತಲೆಗೆ ಬಲವಾಗಿ ಹೊಡೆದಿದ್ದಾರೆ.

ತೀವ್ರವಾದ ಪೆಟ್ಟಿನಿಂದ ಕುಸಿದು ಬಿದ್ದಿದ್ದ ನಿವೇಶ್​ನನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಪರಿಚಿತ  ಎಂದು ಹೇಳಿ ದಾಖಲಿಸಿ ಹೋಗಿದ್ದಾರೆ. ಆ ಬಳಿಕ ನಿವೇಶ್​ ಮೃತಪಟ್ಟಿದ್ದಾನೆ. ಇದನ್ನ ತಿಳಿದ ಆಸ್ಪತ್ರೆ ಸಿಬ್ಬಂದಿ ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಅನಾಥ ಶವ ಅಂತಾ ಆಸ್ಪತ್ರೆ ಸಿಬ್ಬಂದಿ ಮೃತದೇಹ ಪರಿಶೀಲನೆ ನಡೆಸಿದಾಗ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಈ ವೇಳೆ ಮಾಹಿತಿ ಕಲೆ ಹಾಕಿದ ಪೊಲೀಸರು ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾಗಿರೋದು ಗೊತ್ತಾಗಿದೆ. ನಂತರ ಪ್ರಕರಣವನ್ನು ವಿವಿ ಪುರಂ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಇನ್ನು ವಿವಿ ಪುರಂ ಠಾಣೆಯಲ್ಲಿ ನಿವೇಶ್​ ಪೋಷಕರು ಮಗ ಕಾಣೆಯಾಗಿದ್ದಾನೆ ಅಂತ ದೂರು ದಾಖಲಿಸಿದ್ದಾರೆ. ಆಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಮೃತದೇಹ ತೋರಿಸಿದಾಗ ನಿವೇಶ್​ ಹೆಣವಾಗಿ ಬಿದ್ದಿದ್ದನ್ನು ಗುರುತಿಸಿದ್ದಾರೆ. ಇನ್ನು ತನಿಖೆಯನ್ನ ಚುರುಕುಗೊಳಿಸಿದ ಪೊಲೀಸರು ಆರೋಪಿ ನಾರಾಯಣ್​ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಮೃತಯುವಕ ತನ್ನ ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದದ್ದನ್ನು ಕಂಡು ಕೊಲೆ ಮಾಡಿರೋದಾಗಿ ಹೇಳಿದ್ದಾನೆ ಎನ್ನಲಾಗಿದೆ.

News First Live Kannada


Leave a Reply

Your email address will not be published. Required fields are marked *