ಮಗಳ ಜತೆ ಸಂಬಂಧ ಹೊಂದಿದ್ದ ಯುವಕನನ್ನು ಯುವತಿಯ ಪೋಷಕರೇ ಕೊಲೆ ಮಾಡಿಸಿದ ಆರೋಪ; 10 ಜನರ ಬಂಧನ | Belagavi police arrest 10 accused for murder a youth who have relationship with their daughter

ಮಗಳ ಜತೆ ಸಂಬಂಧ ಹೊಂದಿದ್ದ ಯುವಕನನ್ನು ಯುವತಿಯ ಪೋಷಕರೇ ಕೊಲೆ ಮಾಡಿಸಿದ ಆರೋಪ; 10 ಜನರ ಬಂಧನ

ಸಾಂಕೇತಿಕ ಚಿತ್ರ

ಬೆಳಗಾವಿ: ರೈಲ್ವೆ ಹಳಿಯ ಮೇಲೆ 24 ವರ್ಷದ ಮುಸ್ಲಿಂ ಸಮುದಾಯದ ಯುವಕನೋರ್ನನ ಮೃತದೇಹ ಪತ್ತೆಯಾಗಿದ್ದು, ಮೃತ ಯುವಕನ ಜತೆ ಸಂಬಂಧವಿಟ್ಟುಕೊಂಡಿದ್ದ ಯುವತಿಯ ಪೋಷಕರನ್ನೂ ಸೇರಿ 10 ಆರೋಪಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 28ರಂದು ಅರ್ಬಾಜ್ ಮುಲ್ಲಾಹ್ ಎಂಬಾತನ ಮೃತದೇಹ ರೈಲ್ವೆಹಳಿಗಳ ಮೇಲೆ ಪತ್ತೆಯಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ತಲೆಯ ಭಾಗದಲ್ಲಿ ಗಾಯಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಯುವತಿಯ ಪೋಷಕರಾದ ಈರಪ್ಪ ಮತ್ತು ಸುಶೀಲ, ಜತೆಗೆ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಕಾರ್ಯಕರ್ತ ಎನ್ನಲಾದ ನಾಗಪ್ಪ ಅವರುಗಳೇ ಪ್ರಕರಣದ ಪ್ರಮುಖ ಆರೋಪಿಗಳು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ತನ್ನ ಮಗಳ ಜತೆಗೆ ಸಂಬಂಧವನ್ನು ಅಂತ್ಯಗೊಳಿಸುವಂತೆ ಯುವತಿಯ ಅಪ್ಪ ನಾಗಪ್ಪ ಅರ್ಬಾಜ್ ಮುಲ್ಲಾಹ್​ಗೆ ಸೂಚಿಸಿದ್ದ. ಅಲ್ಲದೇ ನಾಗಪ್ಪ ಎಂಬಾತನ ಜತೆಗೂಡಿ ಮುಲ್ಲಾಹ್ನನ್ನು ಬೇಟಿ ಮಾಡಿ ಒತ್ತಡ ಹೇರಿದ್ದ. ಆದರೆ ಮುಲ್ಲಾಹ್ ಯುವತಿಯ ಜತೆ ಸಂಬಂಧ ಕಡಿದುಕೊಳ್ಳಲು ಒಪ್ಪಿರಲಿಲ್ಲ. ಹೀಗಾಗಿ ಆರೋಪಿ ನಾಗಪ್ಪ 7 ಜನರಿಗೆ ಸುಪಾರಿ ಕೊಟ್ಟು ಮುಲ್ಲಾಹ್​ನನ್ನು ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಲ್ಲಾಹ್​ನ ತಾಯಿ ನಜೀಮಾ ಮಹಮದ್ ಶೇಖ್ ಯುವತಿಯ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾಳೆ. ಯುವತಿಯ ಪೋಷಕರು ಸಂಬಂಧ ಅಂತ್ಯಗೊಳಿಸುವಂತೆ ಬೆದರಿಕೆ ಹಾಕಿದ್ದರು. ಆದರೂ ನನ್ನ ಮಗ ಯುವತಿಯನ್ನು ಭೇಟಿಯಾಗುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಯುವತಿಯ ಪೋಷಕರು ನಮಗೆ ಬೆದರಿಕೆ ಒಡ್ಡಿದ್ದರು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ಈಕುರಿತು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:

 Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

Air India: ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ

TV9 Kannada

Leave a comment

Your email address will not be published. Required fields are marked *