ಚಿಕ್ಕಬಳ್ಳಾಪುರ: ತನ್ನ ಮಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ತಂದೆಯೋರ್ವ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರ ಗೌರಿಬಿದನೂರು ತಾಲೂಕಿನ ಕಲ್ಲಿನಾಯಜನಹಳ್ಳಿ ಬಳಿ ನಡೆದಿದೆ.

ಬಸವಾಪುರ ಗ್ರಾಮದ ಫೀರೋಜ್ ಖಾನ್(26) ಹಲ್ಲೆಗೊಳಗಾದವ. ಕಲ್ಲಿನಾಯಕನಹಳ್ಳಿಯ ಗಂಗಾಧರ್ ಎಂಬಾತ ಹಲ್ಲೆ ಮಾಡಿದವ. ಅಂದಹಾಗೆ ತನ್ನ ಮಗಳ ಜೊತೆ ಫಿರೋಜ್ ಖಾನ್ ಅಕ್ರಮ ಸಂಬಂಧ ಇಟ್ಟುಕೊಂಟಿದ್ದಾನೆ ಅಂತ ಅರಿತು ಗಂಗಾಧರ ದೊಡ್ಡಬಳ್ಳಾಪುರಕ್ಕೆ ಹೋಗಬೇಕು ಬಾ ಅಂತ ಫಿರೋಜ್ ಖಾನ್ ನನ್ನ ಕರೆಸಿಕೊಂಡಿದ್ದಾನೆ. ಈ ವೇಳೆ ಫಿರೋಜ್ ಕೊಲೆ ಮಾಡಲು ಯತ್ನಿಸಿದ್ದಾನೆ.

ಬಳಿಕ ಘಟನಾ ಸ್ಥಳದಿಂದ ಗಂಗಾಧರ್ ಪರಾರಿಯಾಗಿದ್ದಾನೆ. ಆದರೆ ಫಿರೋಜ್ ಖಾನ್ ಇಡೀ ರಾತ್ರಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ. ಬೆಳಗ್ಗೆ ಸ್ಥಳೀಯರು ಫಿರೋಜ್ ಖಾನ್ ನೋಡಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು.

ಸದ್ಯ ಗಾಯಾಳು ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ಗಂಗಾಧರ್ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಮಗಳ ಜೊತೆ ಅಕ್ರಮ ಸಂಬಂಧ ಶಂಕೆ – ಯುವಕನ ಕೊಲೆಗೆ ಯತ್ನ appeared first on Public TV.

Source: publictv.in

Source link