ಮಗಳ ಜೊತೆ ಪ್ರಿಯಕರನ ಚಲ್ಲಾಟ; ಪ್ರಿಯಕರನನ್ನು ಹತ್ಯೆಗೈದಿದ್ದ ಆರೋಪಿ ತಂದೆ ಅರೆಸ್ಟ್ | Father arrested for killing daughter boyfriend in bengaluru


ಮಗಳ ಜೊತೆ ಪ್ರಿಯಕರನ ಚಲ್ಲಾಟ; ಪ್ರಿಯಕರನನ್ನು ಹತ್ಯೆಗೈದಿದ್ದ ಆರೋಪಿ ತಂದೆ ಅರೆಸ್ಟ್

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಗಳ ಪ್ರಿಯಕರನನ್ನು ಹತ್ಯೆಗೈದಿದ್ದ ಆರೋಪಿ ತಂದೆಯನ್ನು ಬೆಂಗಳೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿನೋಬನಗರ ನಿವಾಸಿ ನಾರಾಯಣ ಬಂಧಿತ ಆರೋಪಿ. ನಿವೇಶ್ ಕುಮಾರ್(19) ಕೊಲೆಯಾದ ಯುವಕ.

ಆರೋಪಿ ನಾರಾಯಣ್, ತನ್ನ ಮಗಳನ್ನು ಪ್ರೀತಿಸುತ್ತಿದ್ದ ನಿವೇಶ್ ಕುಮಾರ್ನನ್ನು ಕೆಲ ದಿನಗಳ ಹಿಂದೆ ಕೊಲೆ ಮಾಡಿದ್ದ. ಆರೋಪಿ ನಾರಾಯಣ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ನಿವೇಶ್ ನಾರಾಯಣ್ ಮನೆಗೆ ಬಂದಿದ್ದ. ಇದೇ ವೇಳೆ ಆಚೆ ಹೋಗಿದ್ದ ನಾರಾಯಣ ಮನೆಗೆ ಹಿಂತಿರುಗಿದ್ದ. ಮನೆಗೆ ಬರುತ್ತಿದ್ದಂತೆ ಮಗಳು ಆತನ ಪ್ರಿಯಕರನ ಜೊತೆ ಇರುವುದನ್ನು ಕಂಡು ಕೋಪಗೊಂಡು ನಿವೇಶ್ ಹತ್ಯೆಗೈದಿದ್ದಾನೆ.

ನಾರಾಯಣ್ ಮನೆಯಲ್ಲಿದ್ದ ಕಟ್ಟಿಗೆಯಿಂದ ನಿವೇಶ್ ತಲೆಗೆ ಹೊಡೆದಿದ್ದಾನೆ. ನಂತರ ಅಪರಿಚಿತ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಆ ವೇಳೆಗೆ ನಿವೇಶ್ ಮೃತಪಟ್ಟಿದ್ದ. ಕಲಾಸಿಪಾಳ್ಯ ಪೊಲೀಸರು ಆಸ್ಪತ್ರೆ ಮಾಹಿತಿ ಅಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ನಿವೇಶ್ ಕಾಣಿಸುತ್ತಿಲ್ಲ ಎಂದು ನಿವೇಶ್ ಪೋಷಕರು ವಿ.ವಿ.ಪುರಂ ಠಾಣೆಗೆ ದೂರು ನೀಡಿದ್ದರು. ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ತೋರಿಸಿದಾಗ ನಿವೇಶ್ ಗುರುತು ಪತ್ತೆಯಾಗಿದೆ. ನಿವೇಶ್ನನ್ನು ಆಸ್ಪತ್ರೆಗೆ ದಾಖಲಿಸಿದ ನಾರಾಯಣ್ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ. ಕಲಾಸಿಪಾಳ್ಯದಿಂದ ಪ್ರಕರಣ ವರ್ಗಾಯಿಸಿಕೊಂಡು ವಿ.ವಿ.ಪುರಂ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *