ಭೋಪಾಲ್: ಮಧ್ಯಪ್ರದೇಶದಲ್ಲಿ ರೈತರೊಬ್ಬರು 2 ಲಕ್ಷ ಹಣವನ್ನ ಆಮ್ಲಜನಕ ಖರೀದಿಗೆ ದೇಣಿಗೆ ನೀಡಿದ್ದಾರೆ.

ಗ್ವಾಲ್​ ದೇವಿಯಾನ್​ನ ರೈತ ಚಂಪಾಲಾಲ್​ ಗುರ್ಜಾರ್​, ತಮ್ಮ ಮಗಳು ಅನಿತಾಳ ಮದುವೆಗಾಗಿ ಒಂದಿಷ್ಟು ಹಣವನ್ನ ಹೊಂದಿಸಿದ್ದರು. ಕಳೆದ ಭಾನುವಾರ ಅನಿತಾ ಮದುವೆ ನೆರವೇರಿದೆ. ಮಗಳ ವಿವಾಹವನ್ನ ಅದ್ಧೂರಿಯಾಗಿ ಮಾಡಬೇಕೆಂದು ಚಂಪಾ ಲಾಲ್​ ಅಂದುಕೊಂಡಿದ್ದರು. ಆದ್ರೆ ಕೊರೊನಾ ಪರಿಸ್ಥಿತಿ ಕಂಡು ಕೊನೇ ಘಳಿಗೆಯಲ್ಲಿ ಮನಸ್ಸು ಬದಲಿಸಿದರು ಎನ್ನಲಾಗಿದೆ.

ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು ಹಲವೆಡೆ ಆಮ್ಲಜನಕದ ಕೊರತೆ ಎದುರಾಗಿದೆ. ಇದನ್ನ ಮನಗಂಡ ಅವರು, ಮಗಳ ಮದುವೆಯನ್ನ ಸ್ಮರಣೀಯವಾಗಿಸಲು ತಾವು ಮದುವೆಗೆ  ಹೊಂದಿಸಿದ್ದ ಹಣವನ್ನೇ ಆಮ್ಲಜನಕ ಖರೀದಿಗೆ ನೀಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಎರಡು ಸಿಲಿಂಡರ್ ವೈದ್ಯಕೀಯ ಆಮ್ಲಜನಕ ಖರೀದಿಸಲು  2 ಲಕ್ಷ ರೂಪಾಯಿಯ ಚೆಕ್ ಅನ್ನು ಜಿಲ್ಲಾಧಿಕಾರಿ ಮಾಯಾಂಕ್ ಅಗ್ರವಾಲ್ ಅವರಿಗೆ ಹಸ್ತಾಂತರಿಸಿದ್ದಾರೆ. ಒಂದು ಸಿಲಿಂಡರ್ ಜಿಲ್ಲಾ ಆಸ್ಪತ್ರೆಗೆ ಮತ್ತು ಇನ್ನೊಂದನ್ನು ಅವರು ವಾಸಿಸುವ ಜೀರನ್ ತಹಸಿಲ್​ನ ಆಸ್ಪತ್ರೆಗೆ ನೀಡಲು ಕೇಳಿದ್ದಾರೆ. ಜಿಲ್ಲಾಧಿಕಾರಿ ಚಂಪಾಲಾಲ್​  ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ.

The post ಮಗಳ ಮದುವೆಗೆ ಕೂಡಿಟ್ಟ ₹2 ಲಕ್ಷವನ್ನ ಆಕ್ಸಿಜನ್ ಖರೀದಿಗೆ ದೇಣಿಗೆ ನೀಡಿದ ರೈತ appeared first on News First Kannada.

Source: News First Kannada
Read More