ಮಗಳ ಮದುವೆಯ ದಿನ ಮಗಳೊಂದಿಗೆ ಕುಣಿದ ಈ ಅಪ್ಪ, ವಿಡಿಯೋ ವೈರಲ್ | Dance Moves Of Bride And Her Father Amaze Netizens


Dance : ವಿಡಿಯೋ ಹಳೆಯದಾದರೂ ನೃತ್ಯ ಎಂದೂ ಹಳೆಯದಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಶಾಲಾದಿನಗಳಲ್ಲಿ ಕಲಿತ ಹೆಜ್ಜೆಗಳನ್ನು ಮಗಳು ಅಪ್ಪನಿಗೆ ಹೇಳಿಕೊಟ್ಟಿದ್ದಾಳೆ. ನೋಡಿ ಈ ವಿನೋದಮಯ ನೃತ್ಯ.

ಮಗಳ ಮದುವೆಯ ದಿನ ಮಗಳೊಂದಿಗೆ ಕುಣಿದ ಈ ಅಪ್ಪ, ವಿಡಿಯೋ ವೈರಲ್

ತಂದೆಗೆ ನೃತ್ಯ ಕಲಿಸುತ್ತಿರುವ ವಧು

Viral Video : ಮಗಳ ಮದುವೆಯ ದಿನ ಮಗಳೊಂದಿಗೆ ನರ್ತಿಸಿದ್ದಾರೆ ಇಲ್ಲೊಬ್ಬ ಅಪ್ಪ. ಇದು ಒಂದು ತಿಂಗಳಷ್ಟು ಹಳೆಯದಾದ ವಿಡಿಯೋ ಆದರೂ ನೃತ್ಯವೆಂದೂ ಹಳೆಯದಾಗುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಈ ವಿಡಿಯೋ. ಅದಕ್ಕೇ ಇದು ವೈರಲ್ ಆಗಿದೆ. ಆಗಸ್ಟ್​ 21ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಧು ಬ್ರಿಟಾನಿ ರೆವೆಲ್​ ಮತ್ತು ಆಕೆಯ ತಂದೆ ಕ್ಯಾಲಿ ಸ್ವಾಗ್ ಡಿಸ್ಟ್ರಿಕ್ಟ್ ‘ಮಿ ಹೌ ಟು ಡೌಗಿ’ ಎಂಬ ಹಾಡಿಗೆ ನರ್ತಿಸಿದ್ದಾರೆ. 47 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಸ್ಯಾನ್​ ಡಿಯಾಗೋದಲ್ಲಿ ವಾಸಿಸುತ್ತಿರುವ 30 ವರ್ಷದ ವಧು ಬ್ರಿಟಾನಿ ಪ್ರಕಾರ, ಟೂಟ್ಸಿ, ರೂಲ್​, ಹ್ಯಾಮರ್ ಡ್ಯಾನ್ಸ್​ ಮತ್ತು ಕಾರ್ಲ್ಟನ್ ಎಂಬ ನೃತ್ಯಪ್ರಕಾರಗಳನ್ನು ಈ ಹಾಡಿಗೆ ಸಂಯೋಜಿಸಲಾಗಿದೆ. 63 ವರ್ಷದ ಬ್ರಿಟಾನಿಕಾಳ ತಂದೆಗೆ ಈ ಹಳೆಯ ಹಾಡು, ನೃತ್ಯವು ಅತಿಥಿಗಳಿಗೆ ಇಷ್ಟವಾಗುತ್ತದೆ ಎಂದು ಮೊದಲೇ ತಿಳಿದಿತ್ತು. ಹಾಗಾಗಿ ಅಪ್ಪ ಮಗಳು ಸೇರಿ ಇದನ್ನು ಆಯೋಜಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಬ್ರಿಟಾನಿ ರೆವೆಲ್ ಈ ವಿಡಿಯೋ ಅನ್ನು ಅವರೇ ಪೋಸ್ಟ್ ಮಾಡಿದ್ದಾರೆ. ಆ ದಿನದ ಅನುಭವವನ್ನು ವಿವರಿಸಲು ಸಾಧ್ಯವಿಲ್ಲ. ಇದರಲ್ಲಿ ನಾನು, ನನ್ನ ಶಾಲಾದಿನಗಳಲ್ಲಿ ಕಲಿತ ಕೆಲ ನೃತ್ಯದ ಮಟ್ಟುಗಳನ್ನು ಹೇಳಿಕೊಟ್ಟಿದ್ದೇನೆ. ಈ ಪ್ರದರ್ಶನದಲ್ಲಿ ಈ ಸಂಗತಿ ವಿನೋದಮಯವಾಗಿತ್ತು ಎಂದಿದ್ದಾರೆ.

ತಂದೆಮಗಳ ನೃತ್ಯಪ್ರದರ್ಶನಕ್ಕೆ ಮಾರುಹೋದ ನೆಟ್ಟಿಗರು, ‘ನಿಮ್ಮಿಬ್ಬರಿಗೆ ಬಗ್ಗೆ ತುಂಬಾ ಪ್ರೀತಿ. ಬಹಳ ಆಪ್ತವಾಗಿತ್ತು ಈ ವಿಡಿಯೋ’ ಎಂದಿದ್ದಾರೆ ಒಬ್ಬರು. ‘ದಶಕದ ಹಿಂದೆ ನಮ್ಮನ್ನು ಈ ಹಾಡು ನೃತ್ಯ ಕರೆದೊಯ್ದವು. ಇದಕ್ಕೆ ನಿಮ್ಮಿಬ್ಬರಿಗೂ ಧನ್ಯವಾದ ಎಂದಿದ್ದಾರೆ ಮತ್ತೊಬ್ಬರು.

TV9 Kannada


Leave a Reply

Your email address will not be published.