ಕೊರೊನಾ ಸಾಂಕ್ರಾಮಿಕ ಹಾಗೂ ಲಾಕ್​ಡೌನ್ ಸಂಕಷ್ಟದಲ್ಲಿರೋ ಸಹಲವಾರು ಮಂದಿಗೆ ನಟ ಕಿಚ್ಚ ಸುದೀಪ್ ಸಹಾಯ ಮಾಡ್ತಿದ್ದಾರೆ. ಈಗ ತಮ್ಮ ಸಹನಟನ ಕಷ್ಟಕ್ಕೆ ಮಿಡಿದು ಕಿಚ್ಚ ಸುದೀಪ್ ನೆರವಾಗಿದ್ದಾರೆ. ವೀರ ಮದಕರಿ ಸಿನಿಮಾದಲ್ಲಿ ತಮ್ಮ ಜೊತೆ ನಟಿಸಿದ್ದ ವಿಜಯ್ ರಾಘವನ್  ಅವರ​ ಮಗಳ ವಿಧ್ಯಾಭ್ಯಾಸಕ್ಕೆ ಸುದೀಪ್ ಸಹಾಯ ಮಾಡಿದ್ದಾರೆ.

ಮಗಳ ಸ್ಕೂಲ್ ಫೀಸ್ ಕಟ್ಟಲಾಗದೆ ವಿಜಯ್ ರ್ರಾಘವನ್ ಸಂಕಷ್ಟಕ್ಕೆ ಸಿಲುಕಿದ್ದರು. ಕೊರೊನಾದಿಂದ ಎರಡು ವರ್ಷದಿಂದ ಅವರಿಗೆ ಸಿನಿಮಾಗಳಲ್ಲಿ ನಟಿಸೋ ಅವಕಾಶ ಸಿಗುತ್ತಿಲ್ಲ. ಕೆಲಸ ಇಲ್ಲದೆ ಮನೆಯಲ್ಲೇ ಇರೋ ವಿಜಯ್, ಮಗಳ ಸ್ಕೂಲ್ ಫೀಸ್​​ಗೂ ಹಣವಿಲ್ಲದೇ ಪರದಾದುತ್ತಿದ್ದರು. ಸ್ಕೂಲ್ ಫೀಸ್ ಕಟ್ಟಿಲ್ಲ ಅಂತ ಆನ್​​ಲೈನ್​ ಕ್ಲಾಸ್​ಗೆ ಸೇರಿಸಿಕೊಂಡಿಲ್ಲ. ಅಲ್ಲದೆ ಶಾಲೆ ಸಿಬ್ಬಂದಿ ಮಗುವಿಗೆ ಟಿಸಿ ಕೊಟ್ಟಿದ್ದಾರೆ.

ಕೊನೆಗೆ ದಿಕ್ಕು ತೋಚದೆ ವಿಜಯ್ ರಾಘವನ್, ತಾನೇ ಓದಿದ್ದ ಶಾಲೆಗೆ ಮಗಳನ್ನ ಸೇರಿಸಿದ್ದರು. ಆ ಶಾಲೆಯ ಆಡಳಿತ ಮಂಡಳಿ, ನಾಲ್ಕು ಕಂತುಗಳಲ್ಲಿ ಸ್ಕೂಲ್ ಫೀಸ್ ಕಟ್ಟುವಂತೆ ಹೇಳಿದೆ. ಈಗ ನಟ ಸುದೀಪ್ ತಮ್ಮ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್​​ ಮುಖಾಂತರ ರಾಘವನ್ ಅವರ ಮಗಳ ಸಂಪೂರ್ಣ ಫೀಸ್​ ಕಟ್ಟಿ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.

The post ಮಗಳ ಸ್ಕೂಲ್ ಫೀಸ್​​ ಕಟ್ಟಲಾಗದೆ ಪರದಾಟ.. ಸಹನಟನ ಕಷ್ಟಕ್ಕೆ ಮಿಡಿದ ಕಿಚ್ಚ appeared first on News First Kannada.

Source: newsfirstlive.com

Source link