ಕೊಪ್ಪಳ: ನಟ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲಾ ಅಗಲಿದ್ದಾರೆ. ಅಪ್ಪು ಅಭಿಮಾನಿಗಳು ಒಂದಲ್ಲ ಒಂದು ರೀತಿ ಪುನೀತ್ಗೆ ಗೌರವ ಸಲ್ಲಿಸುತ್ತಿದ್ದಾರೆ.
ಕೊಪ್ಪಳದ ಇರಕಲ್ಗಡ ಗ್ರಾಮದ ದಂಪತಿಗಳಾದ ಮಂಜುನಾಥ್ ಗುತ್ತೂರ್, ಮೀನಾಕ್ಷಿಗೆ ಹುಟ್ಟಿದ ಮಗುವಿಗೆ ಜ್ಯೂನಿಯರ್ ಅಪ್ಪು ಅಂತ ನಾಮಕರಣ ಮಾಡಿದ್ದಾರೆ. ಮಗು ಜನಿಸಿದ 24 ದಿನಕ್ಕೆ ಅಂದ್ರೆ ಅಪ್ಪು ಮಣ್ಣಲ್ಲಿ ಮಣ್ಣಾದ ದಿನವೇ ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ. ಮಗು ಜನಿಸಿದ 24 ದಿನಕ್ಕೆ ದಂಪತಿ ನಾಮಕರಣ ಮಾಡಿದೆ.
ನಿನ್ನೆಯಷ್ಟೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಗದಗದ ಚಿಕ್ಕ ಪುಟಾಣಿ ಒಂದು ತನ್ನ ಬರ್ತ್ಡೇ ಒಂದನ್ನ ಆಚರಿಸಿಕೊಂಡಿತ್ತು. ಇದೀಗ ಕೊಪ್ಪಳದ ದಂಪತಿ ತಮ್ಮ ಮಗುವಿಗೆ ಅಪ್ಪು ಎಂದು ನಾಮಕರಣ ಮಾಡಿದ್ದಾರೆ.