ಕೊಪ್ಪಳ: ಕರ್ನಾಟಕ ಪ್ರದೇಶ ಕಾಂಗ್ರೆಸ್​​ನಲ್ಲಿ ಇದೀಗ, ಮುಂದಿನ ಸಿಎಂ ವಿಚಾರವೇ ಭಾರೀ ಸದ್ದು ಮಾಡ್ತಿದೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯೊಬ್ಬ ತಮ್ಮ ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ್‌ ಮುರಡಿ, ತಮ್ಮ ಪುತ್ರನಿಗೆ ಸಿದ್ದರಾಮಯ್ಯ ಅಂತಾ ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮೇಲಿನ ಅಪಾರ ಅಭಿಮಾನದಿಂದ ನಾಮಕರಣ ಮಾಡಿದ್ದಾಗಿ ಮಂಜುನಾಥ್‌ ತಿಳಿಸಿದ್ದಾರೆ.

ಮಗ ಜನಿಸಿದ 21 ದಿನಗಳ ಬಳಿಕ ಶಾಸ್ತ್ರೋಕ್ತವಾಗಿ ಸಿದ್ದರಾಮಯ್ಯ ಅಂತಾ ನಾಮಕರಣ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಜಾರಿಗೆ ತಂದ ಯೋಜನೆಗಳು ಬಡವರ ಪಾಲಿಗೆ ಆಶಾದೀಪ ವಾಗಿವೆ .ಆ ಕಾರಣಕ್ಕೆ ಸಿದ್ದರಾಮಯ್ಯ ಅವರ ಹೆಸರು ಮಗನಿಗೆ ನಾಮಕರಣ ಮಾಡಿರುವೆ ಅಂತಾ ತಿಳಿಸಿದ್ದಾರೆ.

The post ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿ ಅಭಿಮಾನ ಮೆರೆದ ಬೆಂಬಲಿಗ appeared first on News First Kannada.

Source: newsfirstlive.com

Source link