ಬಾಲಿವುಡ್ ನಟ ಸಂಜಯ್ ದತ್ ಅವರು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಇದ್ದ ಗರ್ಲ್ಫ್ರೆಂಡ್ಸ್ಗೆ ಲೆಕ್ಕವೇ ಇರಲಿಲ್ಲ. ಅರ್ಜುನ್ ರಮೇಶ್ ಕೂಡ ಸಂಜಯ್ ದತ್ ಅವರನ್ನು ಫಾಲೋ ಮಾಡುತ್ತಾರೆ.
ಅರ್ಜುನ್ ರಮೇಶ್ (Arjun Ramesh) ಅವರು ‘ಬಿಗ್ ಬಾಸ್ ಒಟಿಟಿ’ಗೆ (Bigg Boss OTT) ಕಾಲಿಟ್ಟಿದ್ದಾರೆ. ಅವರು ರಾಜಕೀಯ, ನಟನೆ ಎರಡರಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರದಿಂದ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ಅವರಿಗೆ ಎರಡು ಪತ್ನಿಯರು. ಇದನ್ನು ಆರಂಭದಲ್ಲೇ ಹೇಳಿಕೊಂಡಿದ್ದರು. ಈಗ ಅವರು ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಫ್ಲರ್ಟ್ ವಿಚಾರದಲ್ಲಿ ಸಂಜಯ್ ದತ್ ಅವರನ್ನು ಮೀರಿಸುತ್ತೇನೆ ಎಂದಿದ್ದಾರೆ ಅರ್ಜುನ್.
ಬಾಲಿವುಡ್ ನಟ ಸಂಜಯ್ ದತ್ ಅವರು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಇದ್ದ ಗರ್ಲ್ಫ್ರೆಂಡ್ಸ್ಗೆ ಲೆಕ್ಕವೇ ಇರಲಿಲ್ಲ. ಸಂಜಯ್ ದತ್ ಬಯೋಪಿಕ್ ‘ಸಂಜು’ ಚಿತ್ರದಲ್ಲಿ ಈ ವಿಚಾರವನ್ನು ಹೇಳಲಾಗಿತ್ತು. ಅಚ್ಚರಿ ಎಂದರೆ ಅರ್ಜುನ್ ರಮೇಶ್ ಕೂಡ ಸಂಜಯ್ ದತ್ ಅವರನ್ನು ಫಾಲೋ ಮಾಡುತ್ತಾರೆ.
‘ನಾನು ಎಷ್ಟು ಜನರ ಜತೆ ಫ್ಲರ್ಟ್ ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ಆ ಲೆಕ್ಕವನ್ನು ಇಲ್ಲಿ ಕೊಡೋಕೆ ಹೋಗಲ್ಲ. ಇದರ ಲೆಕ್ಕ ನೀಡೋಕೆ ಹೋದರೆ ಸಂಜಯ್ ದತ್ ಅವರನ್ನು ನಾನು ಹಿಂದಿಕ್ಕುತ್ತೇನೆ’ ಎಂದಿದ್ದಾರೆ ಅರ್ಜುನ್ ರಮೇಶ್. ಈ ಮೂಲಕ ಅವರು ಸಾಕಷ್ಟು ಜನರ ಜತೆ ರಿಲೇಶನ್ಶಿಪ್ನಲ್ಲಿದ್ದೆ, ಫ್ಲರ್ಟ್ ಮಾಡಿದ್ದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
‘ನಾನು ಬಿಗ್ ಬಾಸ್ಗೆ ಹೋಗುವ ದಿನ ನನ್ನ ಇಡೀ ಕುಟುಂಬದವರು ಅಳೋಕೆ ಶುರು ಮಾಡಿದರು. ಅವರಿಗೆ ನನ್ನ ಬಿಟ್ಟು ಬೇರೆ ಪ್ರಪಂಚ ಇಲ್ಲ. ಮಿಲನ್ ನನ್ನ ಮೊದಲ ಹೆಂಡತಿ. ಮದುವೆ ಆಗಿದ್ದಾಗಲೇ ರವಿಕಾ ಜತೆ ಪ್ರೀತಿಯಲ್ಲಿದ್ದೆ. ರವಿಕಾಳನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟೆ. ರವಿಕಾಳನ್ನು ಭೇಟಿ ಮಾಡುವ ವಿಚಾರ ಮಿಲನ್ಗೆ ಗೊತ್ತಾದರೆ ಎಂಬ ಭಯ ಸದಾ ಕಾಡುತ್ತಿತ್ತು. ನಿಮ್ಮ ಲೈಫ್ಗೆ ಅರ್ಥ ಏನು ಎಂದು ರವಿಕಾ ಪಾಲಕರು ಒಂದು ದಿನ ಕೇಳಿದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದಾರೆ ಅವರು.