ಮಗು ದತ್ತು ಕೊಡೋ ನೆಪದಲ್ಲಿ ವಸೂಲಿಗಿಳಿದ ಮಹಾತಾಯಿ- ಖರ್ತನಾಕ್ ಲೇಡಿ ಪೊಲೀಸ್ ವಶಕ್ಕೆ

ಮಗು ದತ್ತು ಕೊಡೋ ನೆಪದಲ್ಲಿ ವಸೂಲಿಗಿಳಿದ ಮಹಾತಾಯಿ- ಖರ್ತನಾಕ್ ಲೇಡಿ ಪೊಲೀಸ್ ವಶಕ್ಕೆ

ಬೆಂಗಳೂರು: ಮಕ್ಕಳಿಲ್ಲ ದಂಪತಿಗೆ ತನ್ನ ಮಗುವನ್ನು ದತ್ತು ನೀಡುವ ನೆಪದಲ್ಲಿ ಮಹಿಳೆಯೊಬ್ಬರು ಹಣ ಮಾಡುತ್ತಿದ್ದ ಘಟನೆದಲ್ಲಿ ಬೆಳಕಿಗೆ ಬಂದಿದೆ. ಮಗು ದತ್ತು ನೀಡುವ ನಾಟಕವಾಗಿ ಮೂರ್ನಾಲ್ಕು ದಂಪತಿಗಳಿಗೆ ವಂಚನೆ ಮಾಡಿದ್ದ ಮಹಿಳೆಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಲತಾ ಎಂಬ ಮಹಿಳೆ ತನ್ನ ಮಗುವನ್ನು ದತ್ತು ಕೊಡುವ ನಾಟಕವಾಡಿ ಹಣ ಪೀಕುತ್ತಿದ್ದ ಮಹಾತಾಯಿಯಾಗಿದ್ದು, ತನಗೆ ಕ್ಯಾನ್ಸರ್ ಇದೆ.. ಹಾಗಾಗಿ ಮಗನನ್ನು ಸಾಕಲಾಗದೆ ದತ್ತು ನೀಡುವುದಾಗಿ ಹೇಳಿ ತನ್ನ ಮಗನನ್ನು ಮಕ್ಕಳಿದ್ದ ದಂಪತಿಗಳಿಗೆ ದತ್ತು ನೀಡೋ ನಾಟಕವಾಡಿ ಹಣಕ್ಕೆ ಬೇಡಿಕೆ ಇಟ್ಟು ವಂಚನೆ ಮಾಡುತ್ತಿದ್ದಳು ಎನ್ನಲಾಗಿದೆ.

ಇದೇ ರೀತಿ ನಗರದ ಕಸ್ತೂರಿ ಎನ್ನುವವರಿಗೆ ತನ್ನ 9 ವರ್ಷದ ಮಗನನ್ನು ದತ್ತು ನೀಡಲು ಲತಾ ಮುಂದಾಗಿದ್ದಳು. ಅದೇ ರೀತಿ ಮಗನನ್ನು ಕಸ್ತೂರಿ ಮನೆಯಲ್ಲಿ ಬಿಟ್ಟು ಹೋಗಿದ್ದ ಲತಾ, ನಾಲ್ಕು ತಿಂಗಳ ಬಳಿಕ ದತ್ತು ಸ್ವೀಕಾರ ಪ್ರಕ್ರಿಯೆಯನ್ನು ಕಾನೂನು ಪ್ರಕ್ರಿಯೆ ಅನ್ವಯ ಮುಗಿಸುವುದಾಗಿ ಹೇಳಿದ್ದಳು. ಇತ್ತ ಕಸ್ತೂರಿ ಅವರು ಮಗುವನ್ನು ತನ್ನ ಸ್ವಂತ ಮಗನಂತೆ ನೋಡಿಕೊಳ್ಳಲು ಆರಂಭಿಸಿದ್ದರು. ಆದರೆ ಎಲ್ಲವೂ ಸರಿ ಇದೇ ಎಂದುಕೊಳ್ಳುತ್ತಿರುವಾಗಲೇ ಮೂರು ತಿಂಗಳ ಬಳಿಕ ಇದ್ದಕ್ಕಿದ್ದಂತೆ 9 ವರ್ಷದ ಬಾಲಕ ಕಣ್ಮರೆಯಾಗಿದ್ದ. ಅಲ್ಲದೇ ಮನೆಯಲ್ಲಿದ್ದ ತನ್ನ ದಾಖಲಾತಿಗಳ ಸಮೇತ ಬಾಲಕ ಪರಾರಿಯಾಗಿದ್ದ. ಬಾಲಕನನ್ನು ಎಷ್ಟು ಹುಡುಕಿದರೂ ಎಲ್ಲೂ ಸಿಗಲಿಲ್ಲ ಎಂದು ಹೇಳಲಾಗಿದೆ. ಬೇರೆ ದಾರಿ ಕಾಣದೆ ದತ್ತು ಪಡೆದವರು ಕಸ್ತೂರಿ ಅವರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಇತ್ತ ಮಗ ಕಾಣೆಯಾದ ವಿಚಾರನ್ನು ಕಸ್ತೂರಿ ಅವರು ತಾಯಿ ಲತಾ ಅವರಿಗೂ ತಿಳಿಸಿದ್ದರು. ಆ ಬಳಿಕ ಕೆಲ ದಿನಗಳ ಬಳಿಕ ಲತಾ ಬಳಿಯೇ ಬಾಲಕ ಪತ್ತೆಯಾಗಿದ್ದ. ಇದು ಬಹಿರಂಗವಾಗುತ್ತಿದಂತೆ ಲತಾ ದತ್ತು‌ ಪಡೆದ ಕಸ್ತೂರಿ ಅವರಿಗೆ ಮೊದಲಿಗೆ 20 ಸಾವಿರ ರೂಪಾಯಿ ಹಣದ ಡಿಮ್ಯಾಂಡ್ ಇಟ್ಟಿದ್ದಾಳಂತೆ. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾನೇ ನಡೆದಿದೆ. ಇಬ್ಬರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ದೊಡ್ಡ ಶಾಕ್​ಕಾದಿತ್ತ.. ವಿಚಾರಣೆ ವೇಳೆ ಲತಾ ಇದೇ ರೀತಿ ಮೂರು ಕಡೆ ವಂಚನೆ ಮಾಡಿರುವ ಪ್ರಕರಣಗಳು ಪತ್ತೆಯಾಗಿವೆ. ಲತಾ ಮಗನನ್ನು ದತ್ತು ನೀಡುವುದಾಗಿ ಹೇಳಿ ಬಳಿಕ ವಾಪಸ್​ ಮನೆಯಿಂದ ಓಡಿ ಬರುವಂತೆ ಮಗನಿಗೆ ಸೂಚನೆ ನೀಡುತ್ತಿದ್ದಳಂತೆ. ಈ ಚಾಲಾಕಿ ತಾಯಿಯ ಮಾತಿನಂತೆ 9 ವರ್ಷದ ಬಾಲಕ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಲತಾಳ ಸಂಪೂರ್ಣ ಮಾಹಿತಿ ಪಡೆದ ಅನ್ನಪೂರ್ಣೇಶ್ವರಿನಗರ ಪೊಲೀಸರು ತಾಯಿ ಮಗನನ್ನು ವಶಕ್ಕೆ ಪಡೆದಿದ್ದಾರೆ.

The post ಮಗು ದತ್ತು ಕೊಡೋ ನೆಪದಲ್ಲಿ ವಸೂಲಿಗಿಳಿದ ಮಹಾತಾಯಿ- ಖರ್ತನಾಕ್ ಲೇಡಿ ಪೊಲೀಸ್ ವಶಕ್ಕೆ appeared first on News First Kannada.

Source: newsfirstlive.com

Source link