-ರಘುಗೆ ಅದೃಷ್ಟ ಪುರುಷ ನೀನೇಂದ ದಿವ್ಯಾ ಸುರೇಶ್

ಬೆಳಗ್ಗೆ ಎದ್ದ ಕೂಡಲೇ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಬಿಸಿ ಬಿಸಿಯಾದ ರುಚಿಕರವಾದ ಕಾಫಿ, ಟೀಯನ್ನು ಸವಿಯುತ್ತಾರೆ. ಆದರೆ ತಮಗೆ ಬೇಕಾದ ಕಾಫಿ ಹಾಗೂ ಟೀಯನ್ನು ಸ್ಪರ್ಧಿಗಳು ಅವರಿಗೆ ಅವರೇ ಮಾಡಿಕೊಂಡು ಕುಡಿಯಬೇಕು. ಈ ಮಧ್ಯೆ ಇಂದು ರಘು ಮತ್ತೊಬ್ಬರ ಕೈಯಲ್ಲಿ ಕಾಫಿ ಮಾಡಿಸಿಕೊಂಡು ಕುಡಿಯುತ್ತಿರುವುದಾಗಿ ಹೇಳಿದಕ್ಕೆ, ದಿವ್ಯಾ ಸುರೇಶ್ ನೀನು ಅದೃಷ್ಟ ಪುರುಷ ಎಂದು ಕಾಮೆಂಟ್ ಮಾಡಿದ್ದಾರೆ.

ಬೆಳಗ್ಗೆ ಎದ್ದು, ಬೆಡ್ ರೂಂ ಏರಿಯಾದಲ್ಲಿ ದಿವ್ಯಾ ಸುರೇಶ್ ಕುಳಿತುಕೊಂಡಿದ್ದಾಗ, ಕಾಫಿ ಯಾವಾಗ ಮಾಡಿಕೊಂಡು ಕುಡಿಯಲಿ ಎಂದು ಯೋಚಿಸುತ್ತಿದ್ದೇನೆ ಎಂದು ರಘುಗೆ ಹೇಳುತ್ತಾರೆ. ಅದನ್ನು ಕೇಳಿ ರಘು ಏನ್ ಮಗ ಎಲ್ಲಾ ಟಾಸ್ಕ್ ತರ ಪ್ಲಾನ್ ಮಾಡುವಂತಾಗಿ ಹೋಯಿತಲ್ಲಾ ಎನ್ನುತ್ತಾರೆ.

ನಂತರ ನೀನು ಕಾಫಿ ಕುಡಿದ್ಯಾ ಎಂದು ದಿವ್ಯಾ ಸುರೇಶ್ ರಘುರನ್ನು ಕೇಳಿದಾಗ, ಇಲ್ಲಾ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ರಘು ಹೇಳುತ್ತಾರೆ. ಆಗ ದಿವ್ಯಾ ಸುರೇಶ್, ನಿನಗೇನಪ್ಪಾ ಮಾಡಿ ಕೊಡುವವರಿದ್ದಾರೆ ಕಾಫಿನಾ.. ಅಂತ ಹೇಳುತ್ತಾ ರೇಗಿಸುತ್ತಾರೆ. ಅದಕ್ಕೆ ರಘು ನಾನು ಕಾಫಿ ಮಾಡಿದರೆ ಡಬ್ಬಾ ತರ ಇರುತ್ತದೆ ಎಂದು ಹೇಳುತ್ತಾ ನಗುತ್ತಾರೆ.

ಇದಕ್ಕೆ ದಿವ್ಯಾ ಸುರೇಶ್ ಬಿಡಪ್ಪಾ ಆಯ್ತು, ಕಾಫಿ ಮಾಡಿಕೊಡುವುದಕ್ಕೆ ಒಬ್ಬರು, ಟಿಫನ್ ಹಾಕಿಕೊಡುವುದಕ್ಕೆ ಒಬ್ಬರು, ನೀರು ಕೊಡುವುದಕ್ಕೆ ಒಬ್ಬರು ಅದೃಷ್ಟ ಪುರುಷ ನೀನು ಎಂದು ಗೇಲಿ ಮಾಡುತ್ತಾರೆ. ನನ್ನ ವೈಫು ಹೇಳಿದ್ಲಾಲ್ಲಾ ಮಜಾ ಮಾಡು ಅಂತಾ, ಏನು ಮಜಾ ಮಾಡುವುದೋ ಇಲ್ಲಿ ಅಂತ ರಘು ಹೇಳುತ್ತಾರೆ. ಆಗ ದಿವ್ಯಾ ಸುರೇಶ್ ಹಾಗೇ ಹೇಳಿಕೊಂಡೇ ಇಲ್ಲಿ ಬೆಳಗ್ಗೆ ಎದ್ದಾಗಲಿಂದಲೂ ಮಲಗುವವರೆಗೂ ನಿನಗೆ ಎಲ್ಲಾ ಸಿಗುತ್ತೆ. ಅದಕ್ಕೆಲ್ಲಾ ಪುಣ್ಯ ಮಾಡಿರಬೇಕು ಎನ್ನುತ್ತಾರೆ.

ಅಂದ್ರೆ ಅದಕ್ಕೆಲ್ಲಾ ಮಚ್ಚೆ ಇರಬೇಕು ಅಂತೀಯಾ ಎಂದು ರಘು ಕೇಳುತ್ತಾರೆ. ಆಗ ದಿವ್ಯಾ ಸುರೇಶ್ ಹಾ.. ಎಂದು ಹೇಳುತ್ತಾ ನಗುತ್ತಾರೆ.

The post ಮಚ್ಚೆ ಇರಬೇಕು ಅಂತ ಹೇಳಿದ್ಯಾಕೆ ರಘು! appeared first on Public TV.

Source: publictv.in

Source link