ಮಠಾಧೀಶರ ನಿದ್ದೆಗೆಡಿಸಿದ ಮೊಟ್ಟೆ; ಏನಿದು ‘ಒಂದು ಮೊಟ್ಟೆಯ ಯೋಜನೆ’..?


ಬೆಂಗಳೂರು: ಮೊಟ್ಟೆ ಸಸ್ಯಹಾರಿನೋ? ಮಾಂಸಹಾರಿನೋ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ. ಆದ್ರೆ ಇದೇ ಪ್ರಶ್ನೆ ಈಗ ಅಂಗನವಾಡಿ ಮಕ್ಕಳಿಗೆ ಕೊಡ್ತಿದ್ದ ಮೊಟ್ಟೆ ವಿಚಾರದಲ್ಲಿ ವಿವಾದ ಎಬ್ಬಿಸಿದೆ. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಮಕ್ಕಳಿಗೆ ಸರ್ಕಾರ ಮೊಟ್ಟೆ ಕೊಡ್ತಿದೆ. ಈ ಯೋಜನೆ ಈಗ ಪರ-ವಿರೋಧಕ್ಕೆ ಕಾರಣವಾಗಿದೆ. ಮೊಟ್ಟೆ ಮಾಂಸಹಾರಿ. ಮಕ್ಕಳಿಗೆ ಕೊಡೋದೇ ಬೇಡ ಅನ್ನೋ ಚರ್ಚೆ ಸಿಎಂ ಅಂಗಳ ತಲುಪಿದೆ.

ಶಾಲಾ ಮಕ್ಕಳ ಪೌಷ್ಟಿಕತೆ ವಿಚಾರದಲ್ಲಿ ಸರ್ಕಾರ ಕೊಡುತ್ತಿರುವ ಮೊಟ್ಟೆಯೇ ಇವತ್ತಿನ ಮೇನ್‌ ಟಾಪಿಕ್‌. ಪ್ರಾಥಮಿಕ ಮಕ್ಕಳಿಗೆ ಅಪೌಷ್ಟಿಕತೆ ಕಾಡಬಾರದು ಅಂತಾ ಪ್ರತಿನಿತ್ಯ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಕೊಡ್ತಿದೆ ಸರ್ಕಾರ. ಆದ್ರೆ, ಮಕ್ಕಳಿಗೂ ಮೊಟ್ಟೆ ಕೊಡೋದು ಬೇಡ ಅನ್ನೋ ಹೊಸ ಚರ್ಚೆ ಹುಟ್ಟುಕೊಂಡಿದೆ. ಅದಕ್ಕೆ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ.

ಹೌದು.. ಮೊಟ್ಟೆ ಮಾಂಸಹಾರಿ. ಅದನ್ನ ಮಕ್ಕಳಿಗೆ ಕೊಡೋದು ಬೇಡ ಅಂತಾ ವಿವಿಧ ಮಠಾಧೀಶರು ಈಗ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡ್ತಿದ್ದಾರೆ. ಯೋಜನೆ ಶುರುವಾಗಿ 1 ವಾರ ಆಗಿದೆ ಅಷ್ಟೇ. ಅಷ್ಟರಲ್ಲಿ ಯೋಜನೆಗೆ ವಿರೋಧ ವ್ಯಕ್ತವಾಗಿದೆ.

ಏನಿದು ಮೊಟ್ಟೆ ಯೋಜನೆ..?
ಇಲ್ಲಿವರೆಗೆ ಕೇವಲ ಅಂಗನವಾಡಿ ಮಕ್ಕಳಿಗೆ ಮಾತ್ರ ಮೊಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ಆದ್ರೆ, ಇದೀಗ ಈ ಯೋಜನೆ ವಿಸ್ತರಿಸಿದ್ದು, ಪ್ರಾಥಮಿಕ & ಹಿರಿಯ ಪ್ರಾಥಮಿಕ ಮಕ್ಕಳಿಗೆ ಅಂದ್ರೆ 1 ರಿಂದ 8ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡಲಾಗ್ತಿದೆ. ಇದೇ ಡಿಸೆಂಬರ್‌ 1 ರಿಂದ ಶುರುವಾದ ಯೋಜನೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಪೂರೈಕೆಯಾಗ್ತಿದೆ.

ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಜಾಸ್ತಿಯಿದ್ದು, ಇಲ್ಲಿ ಮಾತ್ರ ಮೊಟ್ಟೆ ಪೂರೈಕೆ ಮಾಡಲಾಗ್ತಿದೆ. ಮೊಟ್ಟೆ ತಿನ್ನೋರಿಗೆ ಮೊಟ್ಟೆ, ಬಾಳೆಹಣ್ಣು ತಿನ್ನೋರಿಗೆ ಬಾಳೆಹಣ್ಣು ಕೂಡಾ ಕೊಡಲಾಗುತ್ತೆ. ದಿನ ಬಿಟ್ಟು ದಿನ ಅಂತ ತಿಂಗಳಲ್ಲಿ ಪ್ರತಿ ಮಕ್ಕಳಿಗೆ 12 ಮೊಟ್ಟೆ ಕೊಡ್ತಿದ್ದು, ಇದಕ್ಕಾಗಿ ಸರ್ಕಾರ ಪ್ರತಿ ತಿಂಗಳು 39 ಕೋಟಿ ರೂಪಾಯಿ ಖರ್ಚು ಮಾಡ್ತಿದೆ.

ಬೀದರ್‌ಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಭೇಟಿ ಕೊಟ್ಟಾಗ ಭಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ವೇದಿಕೆಯಲ್ಲೇ ಪತ್ರ ಓದಿ ಮೊಟ್ಟೆ ಯೋಜನೆ ರದ್ದು ಮಾಡಿ, ಮೊಟ್ಟೆ ಬದಲು ದ್ವಿದಳ ಧಾನ್ಯ ಕೊಡಿ ಅಂತಾ ಮನವಿ ಸಲ್ಲಿಸಿದ್ದಾರೆ. ಇತ್ತ ಮಂಗಳೂರಿನ ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೂಡಾ ಈ ಹೇಳಿಕೆ ಬೆಂಬಲಿಸಿದ್ದಾರೆ.

ಈ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‌, ಮೊಟ್ಟೆ ಕೊಡೋದು ಸ್ವಾಗತಾರ್ಹ ಅಂತಾ ತಿಳಿಸಿದ್ದಾರೆ. ಬಾಳೆಹಣ್ಣಿನ ಜೊತೆಗೆ ಮೊಟ್ಟೆ ಕೊಡೋದು ಸರಿಯಲ್ಲ ಅನ್ನೋದು ಸ್ವಾಮೀಜಿಗಳ ವಾದ. ಮಕ್ಕಳಿಗೆ ಕೊಡೋ ಮೊಟ್ಟೆಯಲ್ಲಿ ಧಾರ್ಮಿಕ ಅಂಶ ಸೇರಿಕೊಂಡಿದ್ದು, ಈ ವಾದ ಎಲ್ಲಿಗೆ ಬಂದು ಮುಟ್ಟುತ್ತೆ? ಸರ್ಕಾರದ ನಿರ್ಧಾರ ಏನು ಅನ್ನೋದೇ ಈಗ ಪ್ರಶ್ನೆ.

News First Live Kannada


Leave a Reply

Your email address will not be published. Required fields are marked *