ಮಡಿಕೇರಿ: ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ; ಒಂಬತ್ತು ಆರೋಪಿಗಳು ದೋಷ ಮುಕ್ತ | Madikeri News Hindu Activist Death Case Court Verdict details here


ಮಡಿಕೇರಿ: ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ; ಒಂಬತ್ತು ಆರೋಪಿಗಳು ದೋಷ ಮುಕ್ತ

ಸಾಂಕೇತಿಕ ಚಿತ್ರ

ಮಡಿಕೇರಿ: ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಿಂದ ತೀರ್ಪು ನೀಡಿದೆ. ಪ್ರಕರಣದ ಒಂಬತ್ತು ಆರೋಪಿಗಳು ದೋಷ ಮುಕ್ತ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತುಫೈಲ್,‌ ನಯಾಜ್, ಅಫ್ರಿನ್, ಮೊಹಮ್ಮದ್, ಮುಸ್ತಾಫ, ಇಲಿಯಾಸ್, ಇರ್ಫಾನ್, ಮಝೀದ್, ಹ್ಯಾರಿಸ್ ಖುಲಾಸೆ ಮಾಡಲಾಗಿದೆ.

2016 ರ ಆಗಸ್ಟ್​ 14 ರಂದು ಕೊಲೆ ಪ್ರಕರಣ ನಡೆದಿತ್ತು. ಆಟೋ ರಿಕ್ಷಾ ಚಾಲಕನಾಗಿದ್ದ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನಾಗಿದ್ದ ಪ್ರವೀಣ್ ಹತ್ಯೆ ನಡೆದಿತ್ತು. ಆಗಸ್ಟ್ 14ರ ರಾತ್ರಿ ನಡೆದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದ, ಪ್ರವೀಣ್ ರಿಕ್ಷಾ ಬಾಡಿಗೆ ಪಡೆದು ಚಾಕುವಿನಿಂದ ಇರಿದು ಕೊಲೆ ನಡೆಸಲಾಗಿತ್ತು. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿನಲ್ಲಿ ಕೊಲೆ ನಡೆದಿತ್ತು. ಇದೀಗ ಆರೋಪಿಗಳು ದೋಷ ಮುಕ್ತ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ: ನಿಷೇಧಾಜ್ಞೆ ಉಲ್ಲಂಘನೆ: ಮಡಿಕೇರಿಯಲ್ಲಿ ಹಿಂದೂ ಸಂಘಟನೆ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು, ಕಾರ್ಯಕರ್ತರ ಆಕ್ರೋಶ

ಇದನ್ನೂ ಓದಿ: Shocking News: ಮಡಿಕೇರಿಯ ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲು!

TV9 Kannada


Leave a Reply

Your email address will not be published. Required fields are marked *