ಹಾವೇರಿ: ಅನಾರೋಗ್ಯದಿಂದ ನಿನ್ನೆ ವಿಧಿವಶರಾಗಿದ್ದ ಮಾಜಿ ಸಚಿವ ಸಿ ಎಮ್ ಉದಾಸಿ ಪಾರ್ಥೀವ ಶರೀರವನ್ನು ಹುಟ್ಟೂರು ಹಾನಗಲ್ ನಲ್ಲಿ ಇಂದು ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನ ಸ್ವಗ್ರಹಕ್ಕೆ ಆಗಮಿಸಿದ ಪಾರ್ಥಿವ ಶರೀರ ಕಂಡ ಸಂಬಂಧಿಕರು ಹಾಗೂ ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿತು. ನಂತರ ಮೃತದೇಹಕ್ಕೆ ಸಂಬಂಧಿಕರು ಪೂಜಾ ವಿಧಿವಿಧಾನ ಮಾಡಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಈ ವೇಳೆ ಹಲವು ಗಣ್ಯಾತಿಗಣ್ಯರು ಸಚಿವರು, ಶಾಸಕರು ಅಜಾತ ಶತ್ರು ಚನ್ನಬಸಪ್ಪ ಉದಾಸಿಯ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.ನಂತರ ಕುಮಾರೇಶ್ವರ ಮಠದ ಹಿಂಭಾಗ ಸಕಲ ಸರ್ಕಾರಿ ಗೌರವದೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೇರವೇರಿಸಲಾಯಿತು.

ನಿನ್ನೆ ಅಜಾತಶತ್ರು ಎಂದೇ ಖ್ಯಾತಿ ಪಡೆದ ಮಾಜಿ ಸಚಿವ ಹಾಗೂ ಹಾಲಿ ಹಾನಗಲ್ ಶಾಸಕ ಸಿ.ಎಂ ಉದಾಸಿ ವಿಧಿವಶರಾಗಿದ್ದರು. ಇಂದು ಅವರ ಪಾರ್ಥಿವ ಶರೀರ ಜಿಲ್ಲೆಯ ರಸ್ತೆಯುದ್ದಕ್ಕೂ ಮೆರವಣಿಗೆಯ ಮೂಲಕ ಹುಟ್ಟೂರು ಹಾನಗಲ್​ಗೆ ತರಲಾಯಿತು. ಈ ವೇಳೆ ಸ್ವಗ್ರಹಕ್ಕೆ ಉದಾಸಿಯ ಮೃತದೇಹ ಬಂದಾಗ ಪತ್ನಿ ನೀಲಮ್ಮ, ಪುತ್ರ ಶಿವಕುಮಾರ್ ಪುತ್ರಿ ಹಾಗೂ ಮೊಮ್ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತು.

ನಂತರ ಕುಮಾರೇಶ್ವರ ಮಠದ ವೇದಿಕೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನೆಚ್ವಿನ ನಾಯಕನನ್ನು ನೋಡಲು ಗೃಹ ಸಚಿವ ಬೊಮ್ಮಾಯಿ,ಕೆ ಎಸ್ ಈಶ್ವರಪ್ಪ,ಬಿ ಸಿ ಪಾಟೀಲ್, ಸಂಸದರಾದ ಬಿ ವೈ ರಾಘವೇಂದ್ರ, ಜಿ ಎಮ್ ಸಿದ್ದೇಶ್ವರ ಹಾಗೂ ಅನೇಕ ಶಾಸಕರು ಪುಷ್ಪ ಹಾಕಿ ಅಂತಿಮ ನಮನ ಅಲ್ಲಿಸಿದರು.ಈ ವೇಳೆ ಮಾದ್ಯಮಗಳಿಗೆ ಹೇಳಿಕೆ ನೀಡುವಾಗ ಸಿ ಎಂ ಉದಾಸಿಯ ಮಾನಸ ಪುತ್ರ ಎಂದೇ ಖ್ಯಾತರಾಗಿದ್ದ ಬಸವರಾಜ್ ಬೊಮ್ಮಾಯಿ ಭಾವುಕರಾದರು. ಈ ಕ್ಷೇತ್ರದಲ್ಲಿ ಅವರ ಕೆಲಸಗಳನ್ನ ಶಿವಕುಮಾರ್ ಉದಾಸಿ ಮುಂದುವರೆಸಬೇಕು. ಆ ನಂಬಿಕೆ ನಮಗೆ ಇದೆ.. ಅವರ ಸ್ಥಾನದಲ್ಲಿ ಅವರ ಪುತ್ರನನ್ನ ಕಾಣುತ್ತೇವೆಂದು ಪರೋಕ್ಷವಾಗಿ ರಾಜ್ಯ ರಾಜಕಾರಣಕ್ಕೆ ಶಿವಕುಮಾರ್ ಉದಾಸಿ ಬರ್ತಾರೆ ಎಂದು ಹೇಳಿದರು.

The post ಮಣ್ಣಲ್ಲಿ ಮಣ್ಣಾದ ಮಾಜಿ ಸಚಿವ ಸಿ‌.ಎಂ ಉದಾಸಿ: ಮಠಾಧೀಶರ ಸಮ್ಮುಖದಲ್ಲಿ ಅಂತ್ಯಕ್ರಿಯೆ appeared first on News First Kannada.

Source: newsfirstlive.com

Source link