ವಿಜಯಪುರ: ಪುಲ್ವಾಮಾದಲ್ಲಿ ನಡೆದ ಯೋಧರು ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ ಯೋಧ ಕಾಶೀರಾಯ್ ಅವರ ಅಂತ್ಯಕ್ರಿಯೆ ಇಂದು ವಿಜಯನಗರದ ಉಕ್ಕಲಿ ಗ್ರಾಮದ ಬಳಿ ನಡೆದಿದೆ. ಅಂತ್ಯಕ್ರಿಯೆಗೂ ಮುನ್ನ ಸಕಲ ಸರ್ಕಾರಿ ಗೌರವ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಯಿತು.

ಪತ್ನಿ ಹಾಗೂ ತಾಯಿಗೆ ಯೋಧನ ಪಾರ್ಥೀವ ಶರೀರದ ಮೇಲೆ ಹಾಕಿದ್ದ ರಾಷ್ಟ್ರ ಧ್ವಜ ಹಸ್ತಾಂತರ ಮಾಡಲಾಯಿತು. ಯೋಧನ ಪಾರ್ಥೀವ ಶರೀರಕ್ಕೆ ಸೆಲ್ಯೂಟ್ ಹೊಡೆದುಪತ್ನಿ ತಾಯಿ ಹಾಗೂ ಸಹೋದರರು ಗೌರವ ಸಲ್ಲಿಸಿದರು.

ಯೋಧನ ಇಬ್ಬರು ಮಕ್ಕಳು ಅಂತ್ಯಕ್ರಿಯೆ ವೇಳೆ ಹಾಜರಿದ್ದರು.. ಸೇನೆ ಹಾಗೂ ಸ್ಥಳೀಯ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಯರನಾಳ ಮಠದ ಶ್ರೀ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ಲಿಂಗಾಯತ ವಿಧಿವಿಧಾನ ಮೂಲಕ ಅಂತ್ಯಕ್ರಿಯೆ ನಡೆಯಿತು. ಅಂತ್ಯ ಕ್ರಿಯೆಯಲ್ಲಿ ಸಾವಿರಾರು ದೇಶಪ್ರೇಮಿಗಳು ಭಾಗಿಯಾಗಿದ್ದರು.

The post ಮಣ್ಣಲ್ಲಿ ಮಣ್ಣಾದ ರಾಜ್ಯದ ಹೆಮ್ಮೆಯ ವೀರ ಯೋಧ ಕಾಶೀರಾಯ ಬೊಮ್ಮನಹಳ್ಳಿ appeared first on News First Kannada.

Source: newsfirstlive.com

Source link