ಬೆಂಗಳೂರು: ಮತಾಂತರ ನಿಷೇಧ ಮಸೂದೆ, ಸಂಘ ಪರಿವಾರದ ಬಹುಮುಖ್ಯ ಬೇಡಿಕೆ. ಮತಾಂತರ ನಿಷೇಧ ಮಸೂದೆ ಸಂಘ ಪರಿವಾರದ ಬಹುಮುಖ್ಯ ಬೇಡಿಕೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮತಾಂತರ ಪ್ರಕರಣದ ಹೆಚ್ಚು ಹೆಚ್ಚು ವರದಿಯಾಗ್ತಿರುವುದರಿಂದ ಕಾಯ್ದೆ ಜಾರಿಗೆ ಸರ್ಕಾರದ ಮೇಲೆ ಒತ್ತಡಗಳೂ ಹೆಚ್ಚಾಗ್ತಿದೆ. ಹೀಗಾಗಿ ಮತಾಂತರ ನಿಷೇಧ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸಿದ್ಧತೆಗಳು ನಡೀತಿದೆ.
ಈ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಇಬ್ಬರು ಸಚಿವರಲ್ಲಿ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಮಧ್ಯೆ ಕ್ರೆಡಿಟ್ ಫೈಟ್ ಶುರುವಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.
ಆರಗ ಜ್ಞಾನೇಂದ್ರ-ಮಾಧುಸ್ವಾಮಿ ಮಧ್ಯೆ ಕ್ರೆಡಿಟ್ ಪೈಪೋಟಿ
ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಇಬ್ಬರು ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಗೃಹ ಸಚಿವ ಆರಗ ಜ್ಞಾಜೇಂದ್ರ ಹಾಗೂ ಕಾನೂನು ಸಚಿವ ಮಾಧುಸ್ವಾಮಿ.. ಇಬ್ಬರೂ ಕೂಡ ಮೂಸದೆಯ ಕ್ರೆಡಿಟ್ಗಾಗಿ ಫೈಟ್ ಮಾಡ್ತಿದ್ದಾರೆ ಎನ್ನಲಾಗಿದೆ.
ಸಚಿವರ ಮಧ್ಯೆ ಕ್ರೆಡಿಟ್ ಫೈಟ್
ಮತಾಂತರ ನಿಷೇಧ ಕಾಯ್ದೆ ಜಾರಿಯ ಫುಲ್ ಕ್ರೆಡಿಟ್ಗಾಗಿ ಫೈಟ್ ಶುರುವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ಜಾರಿ ಮಾಡಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಕಸರತ್ತು ಆರಂಭಿಸಿದ್ದಾರೆ. ಇತ್ತ ಇದೇ ಕ್ರೆಡಿಟ್ಗಾಗಿ ಕಾನೂನು ಸಚಿವ ಮಾಧುಸ್ವಾಮಿ ಕೂಡ ಸರ್ಕಸ್ ಮಾಡ್ತಿದ್ದಾರೆ. ಕಾಯ್ದೆ ಜಾರಿ ವಿಚಾರದಲ್ಲಿ ಸಂಪೂರ್ಣ ಕ್ರೆಡಿಟ್ ನನಗೆ ಸಿಗಬೇಕು, ಸಂಘ ಪರಿವಾರ ನಾಯಕರ ಕಣ್ಮುಂದೆ ಕ್ರೆಡಿಟ್ ತೆಗೆದುಕೊಳ್ಳಬೇಕು ಅಂತ ನಾಯಕರಿಬ್ಬರು ಜಿದ್ದಿಗೆ ಬಿದ್ದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.
ಸಂಘದ ನಾಯಕರ ಸೂಚನೆಯಂತೆ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ತರಲಾಗ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಕೂಡ ಆಗಲಿದೆ. ಆದರೆ ಅದನ್ನು ಗೃಹ ಇಲಾಖೆ ತರುತ್ತದೆ ಅಂತ ಆರಗ ಜ್ಞಾನೇಂದ್ರ ಹೇಳ್ತಿದ್ರೆ, ಅತ್ತ ಕಾನೂನು ಇಲಾಖೆ ಜಾರಿಗೆ ತರುತ್ತೆ ಅಂತ ಮಾಧುಸ್ವಾಮಿ ಹೇಳ್ತಾ ಮುಸುಕಿನ ಗುದ್ದಾಟ ನಡೆಸ್ತಿದ್ದಾರೆಂತೆ. ಆರ್ಎಸ್ಎಸ್ ನಾಯಕರ ಮುಂದೆ ಹೀರೋ ಆಗಲು ಹೀಗೆ ಇಬ್ಬರೂ ನಾಯಕರು ನಾನು ನಾನು ಅಂತ ಮತಾಂತರ ನಿಷೇಧ ಮಸೂದೆಯ ಕ್ರೆಡಿಟ್ಗಾಗಿ ಫೈಟ್ ಮಾಡ್ತಿದ್ದಾರೆ. ಅಂತಿಮವಾಗಿ ಯಾರು ಕಾಯ್ದೆ ಮಂಡಿಸ್ತಾರೆ ಅನ್ನೋದೆ ಸದ್ಯದ ಕುತೂಹಲ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ