ಮತ್ತಷ್ಟು ಡೇಂಜರ್ ಆಯ್ತು ಕೊರೊನಾ ವೈರಸ್: ಎಲ್ಲೆಲ್ಲಿ.. ಎಷ್ಟು ಡೆಲ್ಟಾ ಪ್ಲಸ್ ಕೇಸ್..?

ಮತ್ತಷ್ಟು ಡೇಂಜರ್ ಆಯ್ತು ಕೊರೊನಾ ವೈರಸ್: ಎಲ್ಲೆಲ್ಲಿ.. ಎಷ್ಟು ಡೆಲ್ಟಾ ಪ್ಲಸ್ ಕೇಸ್..?

ಇನ್ನೇನು ಕೊರೊನಾ ಎರಡನೇ ಅಲೆ ಮುಗೀತು ಅಂತಾ ಜನರು ನಿಟ್ಟುಸಿರು ಬಿಡುವ ಮೊದಲೇ ಮತ್ತೊಂದು ರೂಪಾಂತರಿ ವೈರಸ್​ ಪತ್ತೆಯಾಗಿದೆ. ಉಳಿದ ರೂಪಾಂತರಿಗಳಿಗಿಂತ ಈ ಸೋಂಕು ಪರಿಣಾಮಕಾರಿಯಾಗಿದ್ದು, ರಾಜ್ಯದಲ್ಲೂ ಈ ಕೇಸ್​ವರದಿಯಾಗಿರೋದು ತಜ್ಞರನ್ನೇ ಬೆಚ್ಚಿ ಬೀಳಿಸಿದೆ.

ದೇಶವನ್ನೇ ಕಂಗೆಡಿಸಿದ್ದ ಮಹಾಮಾರಿ ಕೊರೊನಾ ಎರಡನೇ ಅಲೆ ಇನ್ನೇನು ನಿಯಂತ್ರಣಕ್ಕೆ ಬರ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯೂ ಆಗ್ತಿದೆ. ಈ ನಡುವೆ ಮೂರನೇ ಅಲೆಯ ಎಚ್ಚರಿಕೆ ತಜ್ಞರಿಂದ ರವಾನೆಯಾಗಿದ್ರೂ ಸದ್ಯಕ್ಕಂತೂ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿತ್ತು. ಈ ನಡುವೆ ರಿಲೀಫ್​ ಮೂಡ್​ನಲ್ಲಿದ್ದ ಜನರಿಗೆ ಮತ್ತೊಂದು ರೂಪಾಂತರಿ ಶಾಕ್​ ಕೊಟ್ಟಿದೆ.

ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ರೂಪಾಂತರಿ ವೈರಾಣು AY.1 ಅಥವಾ ಡೆಲ್ಟಾ ಪ್ಲಸ್ ಅಂತಾ ಕರೆಯಲಾಗುವ ವೈರಾಣು ಪತ್ತೆಯಾಗಿರೋದು ಮತ್ತಷ್ಟು ಆತಂಕ ಹೆಚ್ಚಿಸಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ 21 ಕೇಸ್​ ವರದಿಯಾಗಿದ್ದರೆ, ರಾಜ್ಯದ ಮೈಸೂರಿನಲ್ಲೂ ಸೋಂಕು ಪತ್ತೆಯಾಗಿರೋದು ತಜ್ಞರಿಗೆ ಟೆನ್ಷನ್​ ತಂದಿಟ್ಟಿದೆ.

ಕೊರೊನಾ ಮೂರನೇ ಅಲೆಯ ಭೀತಿ ನಡುವೆ ಡೆಲ್ಟಾ ಪ್ಲಸ್​ ಆತಂಕ ಮನೆ ಮಾಡಿದ್ದು ಮಹಾರಾಷ್ಟ್ರದ ರತ್ನಗಿರಿಯಲ್ಲಿ 9, ಜಲ್​ಗಾಂವ್​ನಲ್ಲಿ 7, ಮುಂಬೈನಲ್ಲಿ 2 ಪ್ರಕರಣ ದಾಖಲಾಗಿದೆ. ಪಾಲ್​ಘಾರ್, ಥಾಣೆ, ಸಿಂಧುದುರ್ಗದಲ್ಲಿ ತಲಾ ಒಂದು ಕೇಸ್​ ವರದಿಯಾಗಿದ್ದರೆ, ಕರ್ನಾಟಕದ ಮೈಸೂರಿನಲ್ಲೂ ವೈರಸ್​ನ ಮೊದಲ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಕರ್ನಾಟಕದದಲ್ಲಿ ಡೆಲ್ಟಾ ಪ್ಲಸ್​ ವೈರಸ್ ಸೋಂಕು ಬೆಳಕಿಗೆ ಬಂದಿದೆ.

ಇನ್ನು ರಾಜ್ಯ ರಾಜಧಾನಿಯನ್ನೂ ಡೆಲ್ಟಾ ಪ್ಲಸ್​ ವೈರಸ್​ ಭೀತಿ ಕಾಡತೊಡಗಿದೆ. ಆದ್ರೆ ಈವರೆಗೆ ಬೆಂಗಳೂರಲ್ಲಿ ಅಂಥ ಯಾವುದೇ ಕೇಸ್​ ಪತ್ತೆಯಾಗಿಲ್ಲ ಅಂತಾ ಬಿಬಿಎಂಪಿ ಆಯುಕ್ತರೇ ಸ್ಪಷ್ಟಪಡಿಸಿದ್ದಾರೆ.

ಡೆಲ್ಟಾ ಪ್ಲಸ್ ಸೋಂಕು ಅತ್ಯಂತ ನಟೋರಿಯಸ್ ಕಿಲ್ಲರ್ ವೈರಸ್ ಆಗಿದ್ದು, ನೇರವಾಗಿ ಮನುಷ್ಯನ ಹೃದಯಕ್ಕೆ ಅಟ್ಯಾಕ್ ಮಾಡುತ್ತೆ. ಅಲ್ಲದೆ ಈ ಸೋಂಕಿಗೆ ಒಳಗಾದವರು ಐಸಿಯು ಸೇರಿದರೂ ಗುಣಮುಖರಾಗೋಕೆ ಬಹಳ ಸಮಯ ಬೇಕಾಗುತ್ತೆ. ಹೀಗಾಗಿ ಡೆಲ್ಟಾ ವೈರಸ್ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್​ನ ಅವಶ್ಯಕತೆಯೂ ಎದುರಾಗಲಿದೆ.

ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆ ಮುಗಿಯುವ ಮೊದಲೇ ಮತ್ತೊಂದು ರೂಪಾಂತರಿ ಭೀತಿ ಎಲ್ಲರ ನಿದ್ದೆಗೆಡಿಸಿದೆ. ಹೀಗಾಗಿ ಜನರು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಿಂಜರಿಕೆ ಮಾಡದೇ ವ್ಯಾಕ್ಸಿನ್​ ಪಡೆಯೋಕೆ ಮುಂದಾಗಬೇಕು ಅನ್ನೋದು ತಜ್ಞರ ಅಭಿಮತ.

The post ಮತ್ತಷ್ಟು ಡೇಂಜರ್ ಆಯ್ತು ಕೊರೊನಾ ವೈರಸ್: ಎಲ್ಲೆಲ್ಲಿ.. ಎಷ್ಟು ಡೆಲ್ಟಾ ಪ್ಲಸ್ ಕೇಸ್..? appeared first on News First Kannada.

Source: newsfirstlive.com

Source link