ಪ್ಯಾನ್​ ಇಂಡಿಯಾ ಸ್ಟಾರ್​ ನಟ ಪ್ರಭಾಸ್​​ ಹೆಸರು ನಟಿಯರ ಜೊತೆ ತಳುಕು ಹಾಕಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸಿನಿಮಾಗಳ ಜೊತೆ ಸೌಂಡ್​ ಮಾಡುತ್ತೆ. ಇದ್ಯಾಕೆ ಅಂತ ಕೇಳಿದ್ರೆ, ಬಹುಷಃ ಪ್ರಭಾಸ್​​ ಬಳಿಯೂ ಇದಕ್ಕೆ ಉತ್ತರವಿಲ್ಲ ಅನಿಸುತ್ತೆ. ಸದ್ಯ ಪ್ರಭಾಸ್​ ಹೆಸರು ತಳುಕು ಹಾಕಿಕೊಂಡಿರುವುದು ಹಾಲಿವುಡ್​ ಸ್ಟಾರ್​ ನಟ ಟಾಮ್​ ಕ್ರೂಸ್​ ನಟನೆಯ ಐಕಾನಿಕ್​ ಸೀರಿಸ್​ ‘ಮಿಷನ್​ ಇಂಪಾಸಿಬಲ್​ 7’ ಜೊತೆ. ಹೌದು.. ಕ್ರಿಸ್ಟೊಫರ್​ ಮೆಕ್ವೆರೀ ನಿರ್ದೇಶನದ ಟಾಪ್​ ಕ್ಲಾಸ್​​ ಸೀರಿಸ್​ನಲ್ಲಿ ಪ್ರಭಾಸ್​​ ನಟಿಸಿದ್ದಾರೆ ಅನ್ನೋ ಸೌಂಡ್​ ನಿನ್ನೆಯಿಂದ ಸುದ್ದಿ ಮಾಡ್ತಿದೆ.

ಕಳೆದ ವರ್ಷ ನಟ ಪ್ರಭಾಸ್​​ ಪ್ಯಾನ್​ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್​’ ಚಿತ್ರದ ಚಿತ್ರೀಕರಣಕ್ಕಾಗಿ ಬಹು ಸಮಯದ ಕಾಲ ಇಟಲಿಯಲ್ಲಿ ಬೀಡು ಬಿಟ್ಟಿದ್ದರು. ಇದೇ ಸಂದರ್ಭ ಇಟಲಿಯಲ್ಲಿ ‘ಮಿಷನ್​ ಇಂಪಾಸಿಬಲ್​ 7’ ಫಿಲ್ಮ್​ ಸೀರಿಸ್​ ಶೂಟಿಂಗ್​ ಕೂಡ ನಡೆಯುತ್ತಿತ್ತು ಅಂತ ಹೇಳಲಾಗ್ತಿದೆ. ಟಾಮ್​ ಕ್ರೂಸ್​ ಜೊತೆಗೆ ಒಂದು ಮುಖ್ಯ ಪಾತ್ರದಲ್ಲಿ ನಟಿಸೋದಕ್ಕೆ ಪ್ರಭಾಸ್​​ರನ್ನ ಇಟಲಿಯಲ್ಲೇ ಸಂಪರ್ಕಿಸಿ ಕಥೆ ಹೇಳಲಾಗಿತ್ತಂತೆ. ಕಥೆ ಕೇಳಿ ಒಪ್ಪಿಕೊಂಡ ಪ್ರಭಾಸ್​​, ಅದೇ ಸಮಯದಲ್ಲಿ ಸಿನಿಮಾದ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು ಅಂತ ಸದ್ಯ ಬಂದಿರೋ ಮಾಹಿತಿಗಳು ಹೇಳ್ತಿವೆ. ಅಸಲಿಗೆ ಮಾಧ್ಯಮವೊಂದು ನಿರ್ದೇಶಕ ಕ್ರಿಸ್ಟೊಫರ್​ ಮೆಕ್ವೆರೀ ಸಂದರ್ಶನ ನಡೆಸಿದ್ದು, ಈ ಸಂದರ್ಶನದಲ್ಲಿ ಈ ವಿಚಾರವನ್ನ ಖುದ್ದು ಕ್ರಿಸ್ಟೊಫರ್​ ಮೆಕ್ವೆರೀ ಬಿಚ್ಚಿಟ್ಟಿದ್ದಾರೆ ಅಂತ ಲಿಖಿತ ಪೋಸ್ಟ್​ ಮೂಲಕ ನಿನ್ನೆಯಷ್ಟೇ ಹಂಚಿಕೊಂಡಿದೆ. ಆದ್ರೆ ಈ ಪೋಸ್ಟ್​ ಎಷ್ಟು ನಿಜ ಅನ್ನೋದಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.

ಸದ್ಯ ಮೂಡ್ತಿರುವ ಪ್ರಶ್ನೆ ಏನಂದ್ರೆ, ಪ್ರಭಾಸ್​ ಹಾಲಿವುಡ್​ ಸಿನಿಮಾದಲ್ಲಿ ನಟಿಸಿದ್ದೇ ಆದ್ರೆ ಇಲ್ಲಿಯವರೆಗೂ ವಿಷಯ ಗುಪ್ತವಾಗಿರಲು ಹೇಗೆ ಸಾಧ್ಯ ಅನ್ನೋದು? ಕಳೆದ ವರ್ಷ ‘ರಾಧೆ ಶ್ಯಾಮ್’​ ಸಿನಿಮಾದ ಶೂಟಿಂಗ್​ ಇಟಲಿಯಲ್ಲಿ ನಡೆದಿದ್ದು, ಇಲ್ಲಿಯವರೆಗೂ ‘ಮಿಷನ್​ ಇಂಪಾಸಿಬಲ್​ 7’ ಸೀರಿಸ್​ ಬಗ್ಗೆ ಪ್ರಭಾಸ್​​ ಆಗಲೀ, ‘ಮಿಷನ್​ ಇಂಪಾಸಿಬಲ್​ 7’ ತಂಡದವರಾಗಿ ಎಲ್ಲೂ ಏನೂ ಹೇಳಿಲ್ಲ. ಆದ್ರೀಗ ಏಕಾಏಕಿ ನಿರ್ದೇಶಕರು ಈ ಸುದ್ದಿ ಬಹಿರಂಗ ಪಡಿಸಿದ್ದಾರೆ ಅನ್ನೋ ವಿಚಾರ ಕೇಳಿ ಬರ್ತಿದೆ.

ಸದ್ಯ ಇದೇ ‘ಮಿಷನ್​ ಇಂಪಾಸಿಬಲ್​ 7’ ಸೀರಿಸ್​ನ ಪ್ಯಾಚ್​ ವರ್ಕ್​ಗಾಗಿ ಪ್ರಭಾಸ್​ ಮತ್ತೆ ಇಟಲಿಗೆ ತೆರಳಿದ್ದಾರೆ ಅನ್ನೋ ವಿಚಾರವೂ ಇದೆ. ಇದೆಲ್ಲವೂ ನಿಜ ಆಗಿದ್ದೇ ಆದ್ರೆ ಪ್ರಭಾಸ್​ ಅಭಿಮಾನಿಗಳ ಖುಷಿಗೆ ಪಾರವೇ ಇರೋದಿಲ್ಲ. ಆದ್ರೆ ಟಾಮ್​ ಕ್ರೂಸ್​ ಮುಂದೆ ಪ್ರಭಾಸ್​​ ಕಡಿಮೆ ತೂಕದ ಪಾತ್ರದಲ್ಲಿ ನಟಿಸೋದು ಯಾವ ಅಭಿಮಾನಿಗೂ ಇಷ್ಟವಾಗೋದಿಲ್ಲ ಅನ್ನೋದು ಮಾತ್ರ ಸತ್ಯ. ಇದೀಗ ನಡೆಯುತ್ತಿರುವ ಚರ್ಚೆಗಳು ನಿಜಾನಾ? ಅಥವಾ ‘ರಾಧೆ ಶ್ಯಾಮ್’​ ಸಿನಿಮಾದ ಪ್ಯಾಚ್​ ವರ್ಕ್​ ಶೂಟ್​ಗಾಗಿ ಪ್ರಭಾಸ್​ ಇಟಲಿಗೆ ಹೋಗಿದ್ದಾರಾ ಏನೂ ತಿಳಿಯುತ್ತಿಲ್ಲ. ಇದಕ್ಕೆಲ್ಲ ಏನಿದ್ರೂ ನಟ ಪ್ರಭಾಸ್​​ ಇಟಲಿಯಿಂದ ವಾಪಸಾಗುತ್ತಿದ್ದಂತೆಯೇ ಉತ್ತರ ನೀಡಬೇಕಾಗಿದೆ.

The post ಮತ್ತೆ ಇಟಲಿಯಲ್ಲಿ ನಟ ಪ್ರಭಾಸ್​​; ಟಾಮ್​ ಕ್ರೂಸ್​ ಜೊತೆ MI-7 ಮಾಡ್ತಿರೋದು ನಿಜನಾ? appeared first on News First Kannada.

Source: newsfirstlive.com

Source link