ಕೊರೊನಾ ಎರಡನೇ ಅಲೆಯ ಭೀಕರತೆ ಹೆಚ್ಚಾಗುತ್ತಿದ್ದಂತೆ, ಜನ ಸಾಮಾನ್ಯರ ಜೊತೆಗೆ ಸೆಲೆಬ್ರಿಟಿಗಳೂ ಎಚ್ಚೆತ್ತುಕೊಂಡಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಮಾಸ್ಕ್​ ಧರಿಸಿ, ಸ್ಯಾನಿಟೈಸ್​ ಮಾಡ್ಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಂದೇಶ ನೀಡುತ್ತಿದ್ದಾರೆ. ಸದ್ಯ ಈ ಸಾಲಿಗೆ ನಿರ್ದೇಶಕ ಎಸ್​.ಎಸ್ ​ರಾಜಮೌಳಿ RRR ತಂಡ ಕೂಡ ಸೇರಿಕೊಂಡು ಜಾಗೃತಿ ಮೂಡಿಸ್ತಿದೆ.

ಹೌದು.. ನಿರ್ದೇಶಕ ರಾಜಮೌಳಿ ಆ್ಯಕ್ಷನ್​ ಕಟ್​ ಹೇಳ್ತಿರುವ RRR ತಂಡದ ಸದಸ್ಯರು ಒಂದಾಗಿ ಅಭಿಮಾನಿಗಳಲ್ಲಿ ಮನವಿ ಮಾಡ್ಕೊಂಡಿದ್ದಾರೆ. ವಿಶೇಷ ಅಂದ್ರೆ, ತಂಡದ ಐವರು ಸದಸ್ಯರು ಐದು ಭಾಷೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದರಲ್ಲೂ ನಟ ಜ್ಯೂನಿಯರ್​ NTR ಅಚ್ಚ ಕನ್ನಡದಲ್ಲಿ ಮಾತನಾಡಿ, ಸಂದೇಶ ನೀಡಿರೋದು ಕೇಳೋದಕ್ಕೂ ಹಿತ ಅನಿಸುವಂತಿದೆ. ಈಗಾಗಲೇ ಹಲವು ಬಾರಿ ತಮ್ಮ ಕನ್ನಡ ಪ್ರೇಮ ತೋರಿರುವ ಜ್ಯೂ.ಎನ್​ಟಿಆರ್, ಈ ಬರಿಯೂ ಸ್ಪಷ್ಟ ಮತ್ತು ಅಸ್ಖಲಿತ ಕನ್ನಡದಲ್ಲಿ ಮಾತನಾಡಿದ್ದಾರೆ.

ಎಲ್ಲರೂ ಮಾಸ್ಕ್​ ಧರಿಸಿ, ಸ್ಯಾನಿಟೈಸರ್​ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದಿರುವ RRR ತಂಡ, ದೇಶದಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್​ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆಯೂ ಕೇಳಿಕೊಂಡಿದ್ದಾರೆ. RRR ತಂಡದ ಸದಸ್ಯರಾದ ಆಲಿಯಾ ಭಟ್​, ರಾಮ್​ಚರಣ್​, ಜ್ಯೂನಿಯರ್​ NTR, ಅಜಯ್​ ದೇವಗನ್​ ಹಾಗೂ ನಿರ್ದೇಶಕ ಎಸ್​.ಎಸ್​ ರಾಜಮೌಳಿ ಈ ವಿಡಿಯೋದಲ್ಲಿ ಸಂದೇಶ ನೀಡಿದ್ದಾರೆ.

RRR ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಜೂನ್​ ತಿಂಗಳವರೆಗೆ ಶೂಟ್​ ಮಾಡುವ ಪ್ಲ್ಯಾನ್​ ಹಾಕಿಕೊಂಡಿತ್ತು ಎನ್ನಲಾಗ್ತಿದೆ. ಅಕ್ಟೋಬರ್​ ತಿಂಗಳಲ್ಲಿ ಸಿನಿಮಾದ ರಿಲೀಸ್​​ ಡೇಟ್​ ಅನೌನ್ಸ್​ ಆಗಿತ್ತಾದ್ರೂ, ಇದೀಗ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಎಲ್ಲವೂ ಬದಲಾಗುವ ಸಾಧ್ಯತೆ ಕಾಣುತ್ತಿದೆ.

The post ಮತ್ತೆ ಕನ್ನಡ ಪ್ರೇಮ ಮೆರೆದ ಜ್ಯೂ.NTR; ರಾಮಚರಣ, ಆಲಿಯಾ ಮುಂದೆ ಕನ್ನಡದಲ್ಲೇ ಕರೆ ಕೊಟ್ಟ ಸ್ಟಾರ್ appeared first on News First Kannada.

Source: newsfirstlive.com

Source link