2018 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ನಟಿ ಭಾವನಾ ರಾಮಣ್ಣ ಅವರು ಮತ್ತೇ ಮಾತೃ ಪಕ್ಷ ಕಾಂಗ್ರೆಸ್ಗೆ ಮರಳಿದ್ದು ಅವರಿಗೆ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸರ್ಜೇವಾಲ, ಕಾಂಗ್ರೆಸ್ಗೆ ಮರಳಿದ ಭಾವನಾ ಅವರಿಗೆ ಶುಭಾಶಯಗಳು. ಅವರು ಇಂದು ನನ್ನನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವ ಸಂಕಲ್ಪವನ್ನು ಮಾಡಿದ್ದಾರೆ. ಪ್ರತಿಯೊಬ್ಬರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ನಾನು ಭಾವಿಸಿದ್ದೇನೆ. ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:‘ಅಧಿಕಾರದಲ್ಲಿದ್ದಾಗ ಎಲ್ರೂ ನಮಸ್ಕಾರ ಮಾಡ್ತಾರೆ, ಇಲ್ಲದಿದ್ದಾಗ ಎದುರಿಗೆ ಸಿಕ್ಕರೂ ಮಾತಾಡಲ್ಲ’
Former Congress activist, Kannada actress & artist Bhavana Ramanna met me and committed herself to join and serve the Congress Party in Karnataka. Am certain that party will be strengthened with each individual dedicating themselves. My best wishes. pic.twitter.com/idRLIxz5nB
— Randeep Singh Surjewala (@rssurjewala) November 16, 2021
ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾವನಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ನಿರಾಕರಿಸಿತ್ತು. ಆಗ ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಸಭೆಯಿಂದ ಹೊರ ನಡೆದಿದ್ದ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ:ಶ್ರೀಕಿ ಬಳಸಿ ಯೂಥ್ ಕಾಂಗ್ರೆಸ್ ಚುನಾವಣೆ ಹ್ಯಾಕ್; ನಲಪಾಡ್ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ