ನವ ದೆಹಲಿ : ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಸೆಳೆದುಕೊಳ್ಳಲು ಮೇಲಿಂದ ಮೇಲೆ ಹೊಸ ಗರಾಹಕ ಪ್ರಿಯ ಪ್ಲ್ಯಾನ್ ಗಳು ಜಾರಿಗೊಳಿಸುತ್ತಿದೆ. ಈಗ ಮತ್ತೆ ಹೊಸದಾಗಿ ಕೆಲ ಡೇಟಾ ಪ್ಲಾನ್​ಗಳನ್ನ ಪರಿಚಯಿಸಿದೆ. ಈ ಹೊಸ ಪ್ಲ್ಯಾನ್​ ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇವೆ. ಜಿಯೋದ ಈ ಹೊಸ ಪ್ಲ್ಯಾನ್​ ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಜಿಯೋ ಹೊಸ ಪ್ಲ್ಯಾನ್ ಗಳು ಹೇಗಿವೆ..?

22 ರೂ ಜಿಯೋ ಪ್ಲ್ಯಾನ್ : 22 ರೂಪಾಯಿಯ ಈ ಹೊಸ ಪ್ಲ್ಯಾನ್ ನಲ್ಲಿ ಜಿಯೋ(Jio) ಗ್ರಾಹಕರಿಗೆ 4ಜಿ ಹೈ ಸ್ಪೀಡ್​​ 2 ಜಿಬಿ ಇಂಟರ್ ನೆಟ್ ಸೌಲಭ್ಯ ನೀಡಲಿದೆ. 28 ದಿನಗಳ ವ್ಯಾಲಿಡಿಟಿ ಇದು ಹೊಂದಿರಲಿದ್ದು., ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್​ ಸ್ಪೀಡ್​ 645 ಕೆಬಿಪಿಎಸ್​ಗೆ ಇಳಿಯಲಿದೆ ಎಂದು ಕಂಪೆನಿ ಮಾಹಿತಿ ನಿಡಿದೆ.

ಓದಿ : ವಿ.ಎಸ್. ಪಾರ್ಥಸಾರಥಿ ಮಹೀಂದ್ರಾ ಸಮೂಹದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ..!

52 ರೂ. ಜಿಯೋ ಪ್ಲ್ಯಾನ್​ : ಈ ಡೇಟಾ ಪ್ಯಾಕ್ ​ನ ಬೆಲೆ 52 ರೂಪಾಯಿ ಆಗಿದ್ದು, ಇದರಲ್ಲಿ ಗ್ರಾಹಕರು 6 ಜಿಬಿ 4ಜಿ ಹೈಸ್ಪೀಟ್​ ಇಂಟರ್ ನೆಟ್ ಡೇಟಾ ಪಡೆಯಲಿದ್ದಾರೆ. ಡೇಟಾ ಮಿತಿ ಮುಗಿಯುತ್ತಿದ್ದಂತೆಯೇ ಇಂಟರ್ ನೆಟ್ ಸ್ಪೀಡ್ ​ಗೆ 64 ಕೆಬಿಪಿಎಸ್​ ಗೆ ಇಳಿಕೆ ಕಾಣಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್​ ನಲ್ಲಿ ಜಿಯೋ ಅಪ್ಲಿಕೇಶನ್​ ಗೆ ಚಂದಾದಾರಿಕೆ ಕೂಡ ಸಿಗಲಿದೆ.

72 ರೂ. ಜಿಯೋ ಪ್ಲ್ಯಾನ್​ : 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲ್ಯಾನ್ ​ನಲ್ಲಿ ಗ್ರಾಹಕರಿಗೆ 72 ಜಿಬಿ ಹೈಸ್ಪೀಡ್​ ಇಂಟರ್ ನೆಟ್ ಡೇಟಾ ಸಿಗಲಿದೆ.

102 ರೂ ಜಿಯೋ ಪ್ಲ್ಯಾನ್ : ಈ ಜಿಯೋ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನಿ 1 ಜಿಬಿ ಹೈಸ್ಪೀಡ್ ಇಂಟರ್ ನೆಟ್ ದೊರೆಯಲಿದೆ.

152 ಜಿಯೋ ಪ್ಲ್ಯಾನ್​ : ಈ ಪ್ಲ್ಯಾನ್ ​ನಲ್ಲಿ ಗ್ರಾಹಕರಿಗೆ 2 ಜಿಬಿ ಹೈಸ್ಪೀಡ್​ ಡೇಟಾ  ಸಿಗಲಿದೆ. ಅಂದರೆ ಒಟ್ಟು 56 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಓದಿ : ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More