ಬೆಂಗಳೂರು: ಒಂದೆಡೆ ಕೊರೊನಾದ ಎರಡನೇ ಅಲೆ ಸಂಪೂರ್ಣ ಮುಕ್ತಾಯವಾಗುವ ಮುನ್ನವೇ ಸರ್ಕಾರ ಲಾಕ್​ಡೌನ್ ಸಂಪೂರ್ಣವಾಗಿ ಸಡಿಲಿಸಿದೆ. ಇದರಿಂದಾಗಿ ಮಾಲ್​ಗಳು, ಬಾರ್​ಗಳು ಸಹ ಓಪನ್​ ಆಗಿವೆ. ಅವೆಲ್ಲ ಓಪನ್ ಆದಮೇಲೆ ಥಿಯೇಟರ್ ಕೂಡ ಯಾಕೆ ಓಪನ್​ ಮಾಡಿಲ್ಲ ಅಂತಾ ಕೂಗು ಎದ್ದಿದೆ.

ಇದೇ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಫಿಲ್ಮ್ ‌ಚೇಂಬರ್​​ನಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಚರ್ಚೆ ಬಳಿಕ ಸಿಎಂ ಭೇಟಿ ಮಾಡಿ ಚಿತ್ರಮಂದಿರಗಳನ್ನ ತೆರೆಯೋ ಬಗ್ಗೆ ಮನವಿ ಸಲ್ಲಿಸುವುದರ ಬಗ್ಗೆ ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಕರ್, ಸಿಎಂ ಯಾವಾಗ ಸಿಗ್ತಾರೋ ಅಂದು ಮನವಿ ಕೊಡುತ್ತೇವೆ, ಚಿತ್ರಮಂದಿರಗಳ ಉಳಿವಿಗಾಗಿ ಸರ್ಕಾರ ಸಹಕರಿಸಬೇಕು ಅಂತ  ಕೇಳಿಕೊಳ್ಳುತ್ತೇವೆ. ಈಗ ಪಕ್ಕದ ರಾಜ್ಯಗಳಲ್ಲಿ ಥಿಯೇಟರ್ ಓಪನ್ಗೆ ಅವಕಾಶ ಸಿಕ್ಕಿದೆ ಅಂತಾ ಹೇಳಿದ್ದಾರೆ.

ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಕರ್

ಅಲ್ಲದೇ, ಕೇರಳ, ಆಂಧ್ರ, ತೆಲಂಗಾಣದಲ್ಲಿ ಚಿತ್ರಮಂದಿರಗಳನ್ನ ತೆರೆಯೋದಕ್ಕೆ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಜುಲೈ 19ರ ನಂತರ, ಕರ್ನಾಟಕದಲ್ಲೂ ಚಿತ್ರಮಂದಿರ ತೆರೆಯಲಿಕ್ಕೆ ಸರ್ಕಾರ ಅವಕಾಶ ಸಿಗೋ ಸಾಧ್ಯತೆ ಇದೆ. 50% ಅವಕಾಶ ಕೊಟ್ರೆ ನಾವು ಚಿತ್ರಮಂದಿರ ಓಪನ್ ಮಾಡ್ತೇವೆ. ಆದರೆ ಸಿನಿಮಾ ಬಿಡುಗಡೆಗೆ ಚಿತ್ರತಂಡಗಳು ಸಿದ್ದವಾಗೋದು ಕಷ್ಟ. ಕರೆಂಟ್ ಬಿಲ್ ಮತ್ತು ಟ್ಯಾಕ್ಸ್ ಮನ್ನಾ ಮಾಡಬೇಕು ಅಂತ ಕಳೆದ ಕೊರೋನಾ‌ ಸಮಯದಲ್ಲೇ ಒತ್ತಾಯಿಸಿದ್ದೇವೆ. ಈಗಲೂ ಅದನ್ನ ಮಾಡುತ್ತೇವೆ, ಸ್ಟಾರ್​ಗಳ‌ ಸಿನಿಮಾ ರಿಲೀಸ್ ಬಗ್ಗೆ ಪ್ಲಾನ್ ಮಾಡಬೇಕಿದೆ ಅಂತ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಕರ್ ಹೇಳಿದ್ದಾರೆ.

The post ಮತ್ತೆ ಚಿತ್ರಮಂದಿರ ಓಪನ್​​ ಮಾಡಲು ಕೂಗು.. ಈ ಬಾರಿ ಸರ್ಕಾರ ಒಪ್ಪುತ್ತಾ? appeared first on News First Kannada.

Source: newsfirstlive.com

Source link