ಬೆಂಗಳೂರು: ಕೊರೊನಾ ಕುಗ್ಗಿದ ಮೇಲೆ ಮತ್ತೆ ರಾಜಕೀಯವಾಗಿ ಪುಟಿದೇಳಲು ದಳಪತಿಗಳು ತರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ನ್ಯೂಸ್​ಫಸ್ಟ್​ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸರ್ವ ಸಿದ್ಧತೆಗಳೊಂದಿಗೆ ಪಕ್ಷ ಸಂಘಟನೆಯ ಅಖಾಡಕ್ಕೆ‌ ಇಳಿಯಲು ದಳಪತಿಗಳು ಮುಂದಾಗಿದ್ದಾರೆ.

ಕೊರೊನಾ ಕಾರಣದಿಂದ ದಳಪತಿಗಳು ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದರು. ಇದೀಗ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಜೆಡಿಎಸ್ ಮುಖಂಡರು ಸಿದ್ಧತೆ ನಡೆಸಿದ್ದಾರೆ.

ಅಂದ್ಹಾಗೆ ಈಗಾಗಲೇ ಪದಾಧಿಕಾರಿಗಳ, ವಿವಿಧ ಘಟಕಗಳನ್ನು ನಾಯಕರು ವಿಸರ್ಜಿಸಿದ್ದಾರೆ. ಇದೀಗ ಪಕ್ಷ ಸಂಘಟನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವವರಿಗೆ ಘಟಕಗಳ ಜವಾಬ್ದಾರಿ ವಹಿಸಲು ಸಿದ್ಧತೆ ನಡೆಸಿದ್ದಾರೆ. ವಿಸರ್ಜಿಸಿರುವ ಘಟಕಗಳನ್ನ ಪುನರ್ ರಚಿಸಿ ಪಕ್ಷದ ನಿಷ್ಠರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.

2023ರ ಚುನಾವಣೆ ಟಾರ್ಗೆಟ್​
ಮೂಲಗಳ ಪ್ರಕಾರ ಮುಂದಿನ ತಿಂಗಳು ಜೆಡಿಎಸ್ ಹೊಸ ಪದಾಧಿಕಾರಿಗಳನ್ನ ನೇಮಕ ಮಾಡಲಿದೆ. ಈ ಪದಾಧಿಕಾರಿಗಳ ತಂಡ 2023ರ ವಿಧಾನಸಭೆ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನ ಬ್ಯುಸಿಯಾಗಲಿದೆ. ಇನ್ನು ಪಕ್ಷ ಸಂಘಟನೆಯನ್ನೇ ಮೂಲಮಂತ್ರವನ್ನಾಗಿಟ್ಟುಕೊಂಡು ಪದಾಧಿಕಾರಿಗಳ ನೇಮಕ ಮಾಡಿ, ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದುರ ಜೊತೆಗೆ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿನ ‌ಜನಪರ ಕಾರ್ಯಕ್ರಮಗಳು, ರೈತರ ಸಾಲಮನ್ನಾದಂತಹ ಯೋಜನೆಯಗಳನ್ನ ಇಟ್ಟುಕೊಂಡು ಜನರ ತಲುಪಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

The post ಮತ್ತೆ ಪುಟಿದೇಳಲು ದಳಪತಿಗಳು ಪ್ಲಾನ್.. ಜೆಡಿಎಸ್​​ನ ಹೊಸ ಟಾರ್ಗೆಟ್​​ ಯಾವುದು ಗೊತ್ತಾ? appeared first on News First Kannada.

Source: newsfirstlive.com

Source link