ಮತ್ತೆ ಪ್ರಜ್ಞೆ ಬರಲೇ ಇಲ್ಲ! ತಾಯಿಯ ಅಕಾಲಿಕ ನಿಧನ; ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸದ ಪ್ಯಾರಾಲಿಂಪಿಕ್ ಸ್ಟಾರ್ | Para shuttler Krishna Nagar lost mother hours before national sports awards


ಮತ್ತೆ ಪ್ರಜ್ಞೆ ಬರಲೇ ಇಲ್ಲ! ತಾಯಿಯ ಅಕಾಲಿಕ ನಿಧನ; ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸದ ಪ್ಯಾರಾಲಿಂಪಿಕ್ ಸ್ಟಾರ್

ಕೃಷ್ಣ ನಾಗರ್

ಭಾನುವಾರ ರಾಷ್ಟ್ರಪತಿ ಭವನದಲ್ಲಿ ದೇಶದ ಕ್ರೀಡಾ ತಾರೆಗಳಿಗೆ ಕ್ರೀಡಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವರ್ಷ 12 ಆಟಗಾರರಿಗೆ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಮತ್ತು 35 ಆಟಗಾರರಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಖೇಲ್ ರತ್ನ ಪಡೆದ ಆಟಗಾರರಲ್ಲಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಆಟಗಾರ ಕೃಷ್ಣ ನಗರ್ ಅವರ ಹೆಸರೂ ಸೇರಿದೆ. ಆದರೆ ಅವರು ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಒಂದು ದುರಂತ ಘಟನೆಯಿಂದಾಗಿ ನಾಗರ್ ತನ್ನ ಮನೆಗೆ ಮರಳಬೇಕಾಯಿತು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ನಾಗರ್ ದೇಶಕ್ಕೆ ಚಿನ್ನದ ಪದಕವನ್ನು ನೀಡಿದರು. ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ಎಸ್‌ಎಚ್ 6 ಫೈನಲ್‌ನಲ್ಲಿ ಕೃಷ್ಣ ನಾಗರ್ ಹಾಂಕಾಂಗ್‌ನ ಚು ಮನ್ ಕೈ ಅವರನ್ನು ಸೋಲಿಸಿದರು. ಇದಕ್ಕೂ ಮುನ್ನ ನಾಗರ್ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ದುಬೈನಲ್ಲಿ ನಡೆದ ದುಬೈ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್‌ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ನಾಗರ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಅವರ ಕಾರ್ಯಕ್ಷಮತೆಯಿಂದಾಗಿ, ಅವರು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದರು ಆದರೆ ಅವರ ತಾಯಿಯ ಅಖಾಲಿಕ ಸಾವಿನಿಂದ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ.

ತಾಯಿಯ ಮರಣ
ಪ್ರಶಸ್ತಿ ಸ್ವೀಕರಿಸಲು ನಾಗರ್ ಅವರು ನವೆಂಬರ್ 11 ರಂದು ದೆಹಲಿ ತಲುಪಿದ್ದರು. ಆದಾಗ್ಯೂ, ಅವರು ಜೈಪುರಕ್ಕೆ ಹಿಂತಿರುಗಬೇಕಾಯಿತು. ಅವರ ತಂದೆ ಸುನೀಲ್ ನಗರ್ ಅವರು ತಮ್ಮ ತಾಯಿಯ ಸಾವಿನ ಬಗ್ಗೆ ಅವರಿಗೆ ಫೋನ್ ಮೂಲಕ ತಿಳಿಸಲಿಲ್ಲ, ಮನೆಗೆ ಹಿಂತಿರುಗುವಂತೆ ಹೇಳಿದರು. ನಾಗಾರ್ ಜೈಪುರ ತಲುಪಿದಾಗ ಆತನ ತಾಯಿ ತೀರಿಕೊಂಡಿದ್ದಾಳೆಂದು ತಿಳಿಯಿತು. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ನಾಗರ್, “ನವೆಂಬರ್ 10 ರಂದು (ಬುಧವಾರ), ನಾನು ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ದೆಹಲಿಗೆ ತೆರಳಲು ಹೊರಟಿದ್ದೆ. ಹೊರಡುವ ಮೊದಲು ಮಧ್ಯಾಹ್ನ 12:30 ರ ಸುಮಾರಿಗೆ ನಾನು ನನ್ನ ತಾಯಿಗೆ ಅಡುಗೆ ಮಾಡುವಂತೆ ಹೇಳಿದ್ದೆ.ಆದರೆ ಅಮ್ಮ ಯಾವಾಗ ಟೆರೇಸ್​ಗೆ ಹೋದ್ರೋ ಗೊತ್ತಿಲ್ಲ. ಆದರೆ ದೊಡ್ಡ ಸದ್ದು ಕೇಳಿದೆ ನೋಡಿದ ಮೇಲೆ ಗೊತ್ತಾಯ್ತು. ನನ್ನ ತಾಯಿ ಮೊದಲ ಮಹಡಿಯ ಮನೆಯ ಛಾವಣಿಯಿಂದ ಕೆಳಗೆ ಬಿದ್ದಿದ್ದಾರೆ ಎಂದು.

ಕೂಡಲೇ ನಾವು ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು. ವೈದ್ಯರು ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾರಂಭಿಸಿದರು. ನನ್ನ ತಾಯಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ನನಗೆ ಭರವಸೆ ನೀಡಿದರು. ನಂತರವೇ ನಾನು ಗುರುವಾರ ದೆಹಲಿಗೆ ತೆರಳಿದೆ. ಆದರೆ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಿದ್ದ ನಂತರ ಆಕೆಗೆ ಪ್ರಜ್ಞೆ ಬರಲೇ ಇಲ್ಲ ಎಂದು ಹೇಳುತ್ತ ಗದ್ಗಿತರಾದರು. ನಾಗರ್ ಹೊರತುಪಡಿಸಿ ಉಳಿದ 11 ಆಟಗಾರರಿಗೆ ಶನಿವಾರ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು.

TV9 Kannada


Leave a Reply

Your email address will not be published. Required fields are marked *