ಯಾದಗಿರಿ: ಕೃಷ್ಣಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆ ಆಲಮಟ್ಟಿ ಜಲಾಶಯದ ಹೊರಹರಿವು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.

10 ಸಾವಿರ ಕ್ಯೂಸೆಕ್​ಗೆ ಹೆಚ್ಚಿದ ಆಲಮಟ್ಟಿ ಜಲಾಶಯದ ಹೊರಹರಿವನ್ನ ಇಂದು 45 ಸಾವಿರ ಕ್ಯೂಸೆಕ್​​ವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನದ ನಂತರ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತದೆ ಎಂದು ನಾರಾಯಣಪುರ ಬಸವಸಾಗರ ಜಲಾಶಯದ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ.

ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಇಂದು ಮಧ್ಯಾಹ್ನದವರೆಗೆ ಬಸವಸಾಗರ ಜಲಾಶಯಕ್ಕೆ ನೀರು ಬರುವ ಸಾಧ್ಯತೆ ಇದ್ದು, ಸುರಪುರ ಹಾಗೂ ವಡಗೇರಾ ತಾಲೂಕಿನಾದ್ಯಂತ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

The post ಮತ್ತೆ ಪ್ರವಾಹ ಭೀತಿ: ಇಂದು ಆಲಮಟ್ಟಿ ಜಲಾಶಯದ ಹೊರಹರಿವು ಹೆಚ್ಚಳ appeared first on News First Kannada.

Source: newsfirstlive.com

Source link