1976ರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಬಹದ್ದೂರ್ ಗಂಡು ತೆರೆಕಂಡು ಸೂಪರ್ ಹಿಟ್​ ಆಗಿತ್ತು. ಈಗ ಇದೇ ಹೆಸರಿನಲ್ಲಿ ಹೊಸ ಸಿನಿವೊಂದು ಅದ್ದೂರಿಯಾಗಿ ಬರುತ್ತಿದೆ.

ಬಹದ್ದೂರ್ ಅಂದ್ರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೆನಪಿಗೆ ಬರ್ತಾರೆ. ಬಹದ್ದೂರ್ ಗಂಡು ಅಂದ್ರೆ ವರ ನಟ ಡಾ.ರಾಜ್ ಕುಮಾರ್ ಕಣ್ಣ ಮುಂದೆ ಬಂದು ನಿಲ್ತಾರೆ. ಆದ್ರೆ ಈಗ ಹೊಸ ನಟ ಬಹದ್ದೂರ್ ಗಂಡು ಸಿನಿಮಾದ ಟೈಟಲ್ ಮೂಲಕ ಕನ್ನಡಿಗರ ಆಶೀರ್ವಾದಕ್ಕಾಗಿ ಮುಂದೆ ಬಂದಿದ್ದಾರೆ. ಹಾಗಾದ್ರೆ ಯಾರು ಆ ನವ ನಟ ಅನ್ನೋದಕ್ಕೆ ಉತ್ತರ ಕನ್ನಡತಿ ಸಿರಿಯಲ್ ಖ್ಯಾತಿಯ ಕಿರಣ್ ರಾಜ್​.

ಸದ್ಯ ಕಿರಣ್​ ರಾಜ್​ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರೋ ನವ ನಟ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕನ್ನಡತಿ”ಎಂಬ ಧಾರಾವಾಹಿ ಮೂಲಕ ಕಿರಣ್​ ರಾಜ್​ ಕರ್ನಾಟಕದ ಮನೆ ಮಾತಾದ್ರು. ಬಹಳಷ್ಟು ಮಂದಿ ಫೆಮೇಲ್​ ಫ್ಯಾನ್ಸ್​ ಕಿರಣ್​ ರಾಜ್ ಅವರಿಗಿದ್ದಾರೆ.

ಸ್ಮಾಲ್​ ಸ್ಕ್ರಿನ್​ನಲ್ಲಿ ಸಖತ್​ ಫೇಮಸ್​ ಆಗಿರೋ ಕಿರಣ್​ ರಾಜ್​ ಈ ಹಿಂದೆ ‘ಅಸತೋಮ ಸದ್ಗಮಯ’ ಚಿತ್ರದ ಮೂಲಕ ಬಿಗ್​ ಸ್ಕ್ರಿನ್​ಗೂ ಎಂಟ್ರಿಕೊಟಿದ್ದರು. ಈಗ ” ಬಹದ್ದೂರ್​ ಗಂಡು” ಸಿನಿಮಾದ ಮೂಲಕ​ ಹಿರಿತೆರೆಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಕಿರಣ್​ ರಾಜ್​ ಬರ್ತ್​ ಡೇ ಪ್ರಯುಕ್ತ ಬಹದ್ದೂರ್​ ಗಂಡು ಚಿತ್ರತಂಡ ಚಿತ್ರದ ಟೀಸರ್​ ರಿಲೀಸ್ ಆಗಿದೆ.

ನಿರ್ದೇಶಕ ಪ್ರಸಿದ್​ ” ಬಹದ್ದೂರ್​ ಗಂಡು” ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದು, ನಟಿ ಯಾಶ ಶಿವಕುಮಾರ್​ ಕಿರಣ್​ ರಾಜ್​ಗೆ ಜೋಡಿಯಾಗಿದ್ದಾರೆ. ಚಿತ್ರದ ಟೀಸರ್​ನಲ್ಲಿ ಕಿರಣ್​ ರಾಜ್​ ಸಖತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಜಬರ್​ದಸ್ತಾಗಿ ಫೈಟ್​ ಮಾಡಿದ್ದಾರೆ.

ಒಟ್ಟಿನಲ್ಲಿ ಸ್ಮಾಲ್ ಸ್ಕ್ರೀನ್​​​​ ಮೇಲೆ ಮಿಂಚುತ್ತಿರುವ ಕಿರಣ್​ ರಾಜ್​ ಬಿಗ್ ಸ್ಕ್ರೀನ್ಸ್​​​​​​​ ಮೇಲೂ ಚೆನ್ನಾಗಿ ಮಿಂಚಲ್ಲಿ ಎಂಬುದೇ ನಮ್ಮ ಆಶಯ.

 

 

View this post on Instagram

 

A post shared by Kiran Raj (@itskiranraj)

The post ಮತ್ತೆ ಬಿಗ್​ ಸ್ಕ್ರೀನ್​ಗೆ​ ಕಿರಣ್ ರಾಜ್ ಎಂಟ್ರಿ.. ಮಾಸ್​ ಲುಕ್​ನಲ್ಲಿ ‘ಬಹದ್ದೂರ್​ ಗಂಡು’ ಮಿಂಚಿಂಗ್ appeared first on News First Kannada.

Source: newsfirstlive.com

Source link