ನವದೆಹಲಿ: ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆಯ ಪತಿ ಸ್ಯಾಮ್ ಬಾಂಬೆಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಅವರನ್ನ ಬಂಧಿಸಲಾಗಿದೆ.
ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿ ದೂರು ದಾಖಲಿಸಿದ್ದರು. ದೂರು ಬೆನ್ನಲ್ಲೆ ಮುಂಬೈ ಪೊಲೀಸರು ಸ್ಯಾಮ್ ಬಾಂಬೆಯನ್ನ ಬಂಧಿಸಿದ್ದಾರೆ. ಸದ್ಯ ಪೂನಂ ಪಾಂಡೆ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಲೆ, ಕಣ್ಣು ಹಾಗೂ ಮುಖಕ್ಕೆ ಗಂಭಿರ ಗಾಯವಾಗಿದೆ ಅಂತಾ ವರದಿಯಾಗಿದೆ.
ಪೂನಂ ಪಾಂಡೆ ಮುಖ, ತಲೆ, ಕಣ್ಣಿಗೆ ಗಂಭೀರ ಹಲ್ಲೆ
ಸ್ಯಾಮ್ ಬಾಂಬೆ ಅವರು ಬಾಲಿವುಡ್ ಚಿತ್ರಗಳ ನಿರ್ದೇಶಕ, ನಿರ್ಮಾಪಕ ಮತ್ತು ಎಡಿಟರ್ ಆಗಿದ್ದಾರೆ. ನಿನ್ನೆ ಪೂನಂ ಪಾಂಡೆ ಅವರ ಪತಿಯನ್ನ ಬಂಧಿಸಲಾಗಿದೆ. ನಟಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಸದ್ಯ ನಟಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸ್ಯಾಮ್ ಬಾಂಬೆ ಬಂಧನಕ್ಕೆ ಒಳಗಾಗೋದು ಇದೇ ಮೊದಲಲ್ಲ. 2020ರಲ್ಲೂ ಪೂನಂ ಪಾಂಡೆ ಗಂಡನ ವಿರುದ್ಧ ಕಿರುಕುಳ ಮತ್ತು ಹಲ್ಲೆ ಆರೋಪ ಮಾಡಿ ದೂರು ನೀಡಿದ್ದರು. ಅಲ್ಲದೇ ಡಿವೋರ್ಸ್ ಕೂಡ ಪಾಂಡೆ ಮುಂದಾಗಿದ್ದರು. ನಂತರ ಗೋವಾದಲ್ಲಿ ಸ್ಯಾಮ್ ಅವರನ್ನ ಬಂಧಿಸಲಾಗಿತ್ತು.