ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು | Rachita Ram Bold Look In Love You Rachchu Goes viral


ಮತ್ತೆ ಬೋಲ್ಡ್​ ಅವತಾರ ತಾಳಿದ ರಚಿತಾ ರಾಮ್​; ಪಡ್ಡೆ ಹುಡುಗರ ಮನಸ್ಸು ಕದ್ದ ರಚ್ಚು

ರಚಿತಾ ರಾಮ್​-ಅಜಯ್​ ರಾವ್​

ನಟಿ ರಚಿತಾ ರಾಮ್​ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಪಕ್ಕದ ಮನೆ ಹುಡುಗಿ ಪಾತ್ರದ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. ಈಗ ರಚಿತಾ ರಾಮ್​ ಅವರು ಹಾಟ್​ ಅವತಾರ ತಾಳಿದ್ದಾರೆ. ಶೂಟಿಂಗ್​ ಸಂದರ್ಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ಲವ್​ ಯೂ ರಚ್ಚು’ ಸಿನಿಮಾಗಾಗಿ ರಚಿತಾ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅವರ ಹಾಟ್​ ಅವತಾರ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಜಯ್​ ರಾವ್​ ಜತೆ ತುಂಬಾನೇ ಇಂಟಿಮೇಟ್​ ಆಗಿ ಅವರ ಕಾಂಬಿನೇಷನ್​ ಮೂಡಿ ಬಂದಿದೆ. ಈ ಫೋಟೋ ಸಿನಿಮಾಗೆ ಒಳ್ಳೆಯ ಮೈಲೇಜ್​ ನೀಡುವ ಸಾಧ್ಯತೆ ಇದೆ.

ರಚಿತಾ ರಾಮ್​ ಅವರು ಅಜಯ್​ ರಾವ್​ ಜತೆಗೆ ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭದಲ್ಲಿಯೇ ಸಾಕಷ್ಟು ಸುದ್ದಿ ಮಾಡಿತ್ತು. ಫೈಟರ್​ ವಿವೇಕ್​ ಅವರು ಶೂಟಿಂಗ್​ ವೇಳೆ ಹೈ ವೋಲ್ಟೇಜ್​ ತಂತಿ ಸ್ಪರ್ಷಿಸಿ ಮೃತಪಟ್ಟಿದ್ದರು. ಈ ಪ್ರಕರಣದಿಂದ ಸಿನಿಮಾ ತಂಡದ ಕೆಲವರು ಅರೆಸ್ಟ್​ ಕೂಡ ಆಗಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಸಿನಿಮಾ ಪೋಸ್ಟರ್​ ಮೂಲಕ ಸದ್ದು ಮಾಡುತ್ತಿದೆ.

ಮಂಗಳವಾರ (ನವೆಂಬರ್​ 9) ಸಿನಿಮಾದ ವಿಡಿಯೋ ಸಾಂಗ್​ ರಿಲೀಸ್​ ಆಗುತ್ತಿದೆ. ಅದಕ್ಕೂ ಮೊದಲೇ ಚಿತ್ರತಂಡ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಕುತೂಹಲ ಹುಟ್ಟು ಹಾಕುವ ಕೆಲಸ ಮಾಡಿದೆ ಚಿತ್ರತಂಡ. ಈ ಪೋಸ್ಟರ್​ ನೋಡಿ ಪಡ್ಡೆ ಹುಡುಗರು ಫುಲ್​ ಖುಷ್​ ಆಗಿದ್ದಾರೆ. ಇನ್ನು, ವಿಡಿಯೋ ಸಾಂಗ್​ ಹೇಗಿರಬಹುದು ಎನ್ನುವ ಕುತೂಹಲವೂ ಮೂಡಿದೆ.

ಇತ್ತೀಚೆಗೆ ರಚಿತಾ ರಾಮ್​ ಪುನೀತ್​ ಅಂತಿಮ ದರ್ಶನದ ವೇಳೆ ಕಾಣಿಸಿಕೊಂಡಿದ್ದರು. ‘ಪುನೀತ್​ ಜೊತೆ ನಟಿಸಲು ನಾನು ಪುಣ್ಯ ಮಾಡಿದ್ದೆ. ಅದು ನಮ್ಮ ತಾಯಯ ಆಸೆ ಆಗಿತ್ತು. ಅದಕ್ಕಾಗಿ ದೇವರಿಗೆ ನಾನು ಧನ್ಯವಾದ ಹೇಳಬೇಕು. ಗುರುಕಿರಣ್​ ಅವರ ಬರ್ತ್​ಡೇ ಪಾರ್ಟಿಯಲ್ಲಿ ಪುನೀತ್​ ಸಿಕ್ಕಿದ್ದರು. ರಾತ್ರಿ ಅವರು ಪಾರ್ಟಿ ಮುಗಿಸಿ ಹೊರಟಾಗ ಹುಷಾರು ಅಂತ ಹೇಳಿದ್ದೆ. ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬ ಸಂಕಟ ಆಗುತ್ತಿದೆ. ಕೈ ನಡುಗುತ್ತಿದೆ’ ಎಂದು ರಚಿತಾ ಕಣ್ಣೀರು ಸುರಿಸಿದ್ದರು.

ಇದನ್ನೂ ಓದಿ: ‘ತುಂಬ ಸಂಕಟ ಆಗ್ತಿದೆ, ಕೈ ನಡುಗುತ್ತಿದೆ’; ಪುನೀತ್​ ಬಗ್ಗೆ ಮಾತಾಡುತ್ತ ಮೌನ ತಾಳಿದ ರಚಿತಾ ರಾಮ್​

TV9 Kannada


Leave a Reply

Your email address will not be published.