ಮತ್ತೆ ಮಂಗಳಯಾನಕ್ಕೆ ಇಸ್ರೋ ಪ್ಲಾನ್; ಜಪಾನ್​ನೊಂದಿಗೆ ಚಂದ್ರ ಗ್ರಹದಲ್ಲಿ ಅನ್ವೇಷಣೆಗೆ ಚಿಂತನೆ – ISRO Plans to Return to Mars, Explore Dark Side of Moon with Japan Lunar Mission Latest Kannada News


ಜಪಾನ್ ದೇಶದ ಸಹಯೋಗದೊಂದಿಗೆ ಚಂದ್ರನ ಕಪ್ಪು ಭಾಗವನ್ನು ಅನ್ವೇಷಿಸಲು ಇಸ್ರೋ (ISRO) ಯೋಚಿಸಿದೆ. ಇಸ್ರೋ ಮಂಗಳ ಗ್ರಹಕ್ಕೆ ಪುನಃ ಉಪಗ್ರಹವನ್ನು ಕಳುಹಿಸಲು ಚಿಂತನೆ ನಡೆಸಿದೆ

ನವದೆಹಲಿ: ಚಂದ್ರ ಮತ್ತು ಮಂಗಳ ಗ್ರಹಕ್ಕೆ ತೆರಳಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಶುಕ್ರ ಗ್ರಹದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಜಪಾನ್ ದೇಶದ ಸಹಯೋಗದೊಂದಿಗೆ ಚಂದ್ರನ ಕಪ್ಪು ಭಾಗವನ್ನು ಅನ್ವೇಷಿಸಲು ಇಸ್ರೋ (ISRO) ಯೋಚಿಸಿದೆ. ಆಕಾಶ್ ತತ್ವ ಸಮ್ಮೇಳನದಲ್ಲಿ ಇಸ್ರೋದ ಭವಿಷ್ಯದ ಕಾರ್ಯಗಳ ಕುರಿತು ಪ್ರಸ್ತುತಿ ಮಾಡಿದ ಅಹಮದಾಬಾದ್ ಮೂಲದ ಭೌತಿಕ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಅನಿಲ್ ಭಾರದ್ವಾಜ್, ಇಸ್ರೋ ಮಂಗಳ ಗ್ರಹಕ್ಕೆ ಪುನಃ ಉಪಗ್ರಹವನ್ನು ಕಳುಹಿಸಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಚಂದ್ರನಲ್ಲಿರುವ ಶಾಶ್ವತ ನೆರಳಿನಂತಹ ಪ್ರದೇಶವನ್ನು ಅನ್ವೇಷಣೆ ಮಾಡಲು ಲೂನಾರ್ ರೋವರ್ ಅನ್ನು ಕಳುಹಿಸಲು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA)ಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅನಿಲ್ ಭಾರದ್ವಾಜ್ ಹೇಳಿದ್ದಾರೆ. ಸದ್ಯದ ಯೋಜನೆಗಳ ಪ್ರಕಾರ, ಇಸ್ರೋ ನಿರ್ಮಿಸಿದ ಚಂದ್ರನ ಲ್ಯಾಂಡರ್ ಮತ್ತು ರೋವರ್ ಅನ್ನು ಜಪಾನಿನ ರಾಕೆಟ್ ಮೂಲಕ ಚಂದ್ರನ ದಕ್ಷಿಣ ಧ್ರುವದ ಬಳಿ ಯೋಜಿತ ಲ್ಯಾಂಡಿಂಗ್ ಮೂಲಕ ಕಕ್ಷೆಗೆ ಸೇರಿಸಲಾಗುತ್ತದೆ.

TV9 Kannada


Leave a Reply

Your email address will not be published.