ಮತ್ತೆ ರೀ ರಿಲೀಸ್​ ಆಗಲಿದೆ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’

ಮತ್ತೆ ರೀ ರಿಲೀಸ್​ ಆಗಲಿದೆ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’

ಬೆಂಗಳೂರು: ಕಳೆದ ಏಪ್ರಿಲ್ 16 ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ನಟ ಅಜೇಯ್​​​ ರಾವ್​ ಅಭಿನಯದ ‘ಕೃಷ್ಣ ಟಾಕೀಸ್​’ ಮತ್ತೆ ರೀ ರಿಲೀಸ್​​ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.

ಕೃಷ್ಣ ಟಾಕೀಸ್ ಸಿನಿಮಾ ಬಿಡುಗಡೆಯಾದ ಒಂದೇ ವಾರಕ್ಕೆ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾದ ಕಾರಣ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಪರಿಣಾಮ ಒಂದೇ ವಾರಕ್ಕೆ ಕೃಷ್ಣ ಟಾಕೀಸ್ ಚಿತ್ರದ ಪ್ರದರ್ಶನ ತಾತ್ಕಾಲಿಕವಾಗಿ ಚಿತ್ರತಂಡ ನಿಲ್ಲಿಸಿತ್ತು. ಆ ಬಳಿಕ ಸರ್ಕಾರ ಏಪ್ರಿಲ್ 24 ರಿಂದ ಲಾಕ್ ಡೌನ್ ಘೋಷಣೆ ಮಾಡಿತ್ತು.

ಸದ್ಯ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವ ಕಾರಣ ಎರಡನೇ ಹಂತದ  ಅನ್​​ಲಾಕ್​​ನಲ್ಲಿ ಚಿತ್ರಮಂದಿರಗಳ ತೆರೆಯಲು ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದ್ದು, ಒಂದು ವೇಳೆ ಸರ್ಕಾರ ಎರಡನೇ ಹಂತದಲ್ಲಿ ಚಿತ್ರಮಂದಿರಗಳಿಗೆ ಅವಕಾಶ ಕೊಟ್ಟರೆ ಒಂದು ವಾರದ ಗ್ಯಾಪ್ ನಂತರ ಕೃಷ್ಣ ಟಾಕೀಸ್ ಚಿತ್ರವನ್ನು ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎಂದು ನಿರ್ದೇಶಕ  ವಿಜಯ್ ಆನಂದ್ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ.

ಕೃಷ್ಣ ಟಾಕೀಸ್ ಚಿತ್ರದಲ್ಲಿ ಅಜೇಯ್ ರಾವ್ ಗೆ ನಾಯಕಿಯಾಗಿ ಅಪೂರ್ವ ಗೌಡ ನಟಿಸಿದ್ದು, ಇದೇ ಮೊದಲ ಬಾರಿಗೆ ಅಜಯ್ ರಾವ್ ಹಾರಾರ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದರು. ಅಲ್ಲದೆ ಚಿತ್ರಕ್ಕೆ ರಿಲೀಸ್ ಅದ ಮೊದಲ ವಾರ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು.

The post ಮತ್ತೆ ರೀ ರಿಲೀಸ್​ ಆಗಲಿದೆ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ appeared first on News First Kannada.

Source: newsfirstlive.com

Source link