ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಲಾಕ್‍ಡೌನ್ ಹಿನ್ನೆಲೆ ಕುಟುಂಬದೊಂದಿಗೆ ಕಾಲ ಕಳೆದಿದ್ದು, ಫುಲ್ ರೆಸ್ಟ್ ಮಾಡಿದ್ದಾರೆ. ಇದೇ ಗ್ಯಾಪ್‍ನಲ್ಲಿ ಪಕ್ಷದ ಕೆಲಸದಲ್ಲಿ ಸಹ ತೊಡಗಿದ್ದರು. ಆದರೆ ಇದೀಗ ಮತ್ತೆ ವರ್ಕೌಟ್‍ಗೆ ಇಳಿದಿದ್ದು, ಫಿಟ್‍ನೆಸ್ ಕಾಪಾಡುವತ್ತ ಚಿತ್ತ ಹರಿಸಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಜಿಮ್ ವೇರ್ ನಲ್ಲಿ, ಫಿಟ್ ಆಗಿ ಕೈ ಕಟ್ಟಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಗೆಟಿಂಗ್ ಬ್ಯಾಕ್ ಟು ದಿ ಗ್ರೈಂಡ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮತ್ತೆ ಬೆವರಿಳಿಸಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ.

ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿರುವ ನಿಖಿಲ್, ಅಪ್ಪನಾಗಿ ಪ್ರಮೋಶನ್ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಪಕ್ಷದ ಕೆಲಸಗಳಲ್ಲಿ ಸಹ ತೊಡಗಿದ್ದಾರೆ. ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ವರ್ಕೌಟ್ ಕಡೆ ಹೆಚ್ಚು ಗಮನ ನೀಡಿರಲಿಲ್ಲ. ಇದೀಗ ಮತ್ತೆ ವರ್ಕೌಟ್ ಆರಂಭಿಸುತ್ತಿರುವುದಾಗಿ ತಿಳಿಸಿದ್ದಾರೆ.

ಸಿನಿಮಾದಲ್ಲಿಯೂ ತೊಡಗಿರುವ ನಿಖಿಲ್, ಕೆವಿಎನ್ ಬ್ಯಾನರ್ ಅಡಿಯಲ್ಲಿ ನನ್ನ ಮುಂದಿನ ಸಿನಿಮಾ ಬರಲಿದೆ. ವೆಂಕಟ್ ನಾರಾಯಣ್ ಸರ್ ಮತ್ತು ಸುಪ್ರೀತ್‍ಗೆ ತುಂಬಾ ಥ್ಯಾಂಕ್ಸ್. ರಚನೆ ಮತ್ತು ನಿರ್ದೇಶನ ಮಂಜು, ನವೀನ್ ಡಿಒಪಿಯಾಗಿದ್ದಾರೆ. ಅಜನೀಶ್ ಅವರ ಸಂಗೀತ ಇರಲಿದೆ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮುಂದಿನ ಸಿನಿಮಾ ಕುರಿತು ಅಭಿಮಾನಿಗಳಿಗೆ ತಿಳಿಸಿದ್ದರು.

The post ಮತ್ತೆ ವರ್ಕೌಟ್‍ಗೆ ಇಳಿದ ನಿಖಿಲ್ appeared first on Public TV.

Source: publictv.in

Source link