ಮತ್ತೆ ಸಖತ್​​ ಆಗಿ ಕಮ್​​ಬ್ಯಾಕ್​​ ಮಾಡಿದ ಈ ಆಟಗಾರ ಬಗ್ಗೆ ಗವಾಸ್ಕರ್​​ ಹೇಳಿದ್ದೇನು..?


ವೆಸ್ಟ್​ ಇಂಡೀಸ್​​ ವಿರುದ್ಧ ಸರಣಿ ವೈಟ್​​ ವಾಶ್​​ ಬೆನ್ನಲ್ಲೀಗ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಸೀರೀಸ್​​ ಆಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕಳಪೆ ಪ್ರದರ್ಶನ ನೀಡುತ್ತಿದ್ದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಈಗ ಮತ್ತೆ ಫಾರ್ಮ್​​ಗೆ ಮರಳಿದ್ದು, ಟೀಂ ಇಂಡಿಯಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟರ್​​​ ಸುನೀಲ್​​​​ ಗವಾಸ್ಕರ್​​​​​ ಪ್ರಶಂಸೆ ಮಾತುಗಳನ್ನಾಡಿದ್ದಾರೆ.

ಈ ಸಂಬಂಧ ಮಾತಾಡಿದ ಸುನೀಲ್​​ ಗವಾಸ್ಕರ್​​, ಭುವನೇಶ್ವರ್ ಕುಮಾರ್ ಮತ್ತೆ ಕಮ್​​ಬ್ಯಾಕ್​​ ಮಾಡಿದ್ದಾರೆ. ಈ ಹಿಂದೆ ಸೌತ್​​ ಆಫ್ರಿಕಾ ವಿರುದ್ಧ ಅಂತಹ ಪ್ರದರ್ಶನವೇನು ನೀಡಿರಲಿಲ್ಲ. ಆದರೀಗ, ವೆಸ್ಟ್​ ಇಂಡೀಸ್​​ ಸರಣಿಯಲ್ಲಂತೂ ಭುವಿ ಪ್ರದರ್ಶನ ಅದ್ಭುತ ಎಂದರು.

ಇನ್ನು, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋಕೆ ಸಾಕಷ್ಟು ಸ್ಪರ್ಧೆ ಇದೆ. ಭುವಿ ಕಮ್​​ಬ್ಯಾಕ್​​​ ಮಾಡಿದ ರೀತಿ ನೋಡಿದ್ರೆ ಯಾರು ಆತನ ಸ್ಥಾನ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಭುವಿ ಆಡದಿದ್ದಾಗ ಸಾಕಷ್ಟು ಜನ ಟೀಕೆ ಮಾಡಿದ್ದರು. ಇವರಿಗೆ ಭುವಿ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.

News First Live Kannada


Leave a Reply

Your email address will not be published. Required fields are marked *