ಬೆಂಗಳೂರು: ಕಾರಣಾಂತರಗಳಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಈ ಭಾರೀ ಮತ್ತೆ ಸಂಪುಟ ಸೇರೋ ಕನಸು ಕಂಡಿದ್ರು. ಇದೇ ಕಾರಣಕ್ಕೆ ಸಾಕಷ್ಟು ಪ್ರಯತ್ನಗಳು ಮತ್ತು ಲಾಬಿಯನ್ನೂ ನಡೆಸಿದ್ರು. ಇನ್ನೇನೂ ಈ ಭಾರಿ ಸಚಿವ ಸ್ಥಾನ ಪಕ್ಕಾ ಎನ್ನುವಷ್ಟರಲ್ಲೇ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಉಲ್ಲಂಘನೆ ಅಸ್ತ್ರ
ನಾನು ಮತ್ತೆ ಸಚಿವನಾಗಬೇಕು.. ಮತ್ತೆ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕು. ಏನೇ ಆದರೂ ಸರಿ ಬೀಡಲೇಬಾರ್ದು ಅಂತೇಳಿ ರಾಜ್ಯ ನಾಯಕರಿಂದ ಹಿಡಿದು ರಾಷ್ಟ್ರಮಟ್ಟದ ನಾಯಕರ ಮನೆ ಬಾಗಿಲಿಗೆ ಅಲೆದಾಡಿದ್ದಾಗಿತ್ತು. ಸಂಘ ಪರಿವಾರದ ಕದವನ್ನೂ ತಟ್ಟಿದ್ದಾಗಿತ್ತು. ಶತಪ್ರಯತ್ನದ ಬಳಿಕ ಇನ್ನೇನು ಈ ಬಾರಿ ಸಚಿವ ಸ್ಥಾನ ಸೀಗೋದು ಖಚಿತ ಎಂದುಕೊಂಡಿದ್ದ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
CD ಆರೋಪ ಕೇಸ್ಗೆ ಬೆಲೆ ತೆತ್ತು ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಇದೀಗ ಬಹುತೇಕ ಮಗಂಟಿದ್ದ ಕಳಂಕದಿಂದ ಮುಕ್ತರಾಗುವ ಸನ್ನಿಹಿತದಲ್ಲಿದ್ದಾರೆ. ಇದೇ ಕಾರಣ ಮುಂದಿಟ್ಟುಕೊಂಡು ರಾಜ್ಯ ಸಚಿವ ಸಂಪುಟ ಸೇರುವ ಮೂಲಕ ಪ್ರಭಾವ ಹೆಚ್ಚಿಸಿಕೊಳ್ಳೊಕೆ ರಮೇಶ್ ಜಾರಕಿಹೊಳಿ ಹವಣಿಸ್ತಿದ್ದಾರೆ. ಆದರೆ ತಿಂಗಳ ಹಿಂದಷ್ಟೇ ನಡೆದ ಪರಿಷತ್ ಚುನಾವಣೆಯಲ್ಲಾದ ಸೋಲು ರಮೇಶ್ಗೆ ಮುಳುವಾಗುವ ಲಕ್ಷಣ ಗೋಚರಿಸುತ್ತಿದೆ. ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಲಖನ್ಗೆ ರಮೇಶ್ ನೆರವು ನೀಡಿದ್ದೇ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಯ್ತು ಅನ್ನೋ ಆರೋಪ ಮತ್ತಷ್ಟು ಪ್ರಬಲವಾಗ್ತಿದೆ. ಇದೇ ಅಸ್ತ್ರವನ್ನ ಬಳಸಿ ಪರಿಷತ್ ಪರಾಜಿತ ಅಭ್ಯರ್ಥಿ ಮಹಾಂತೇಶ್ ಕಮಟಗಿಮಠ ಸಾಹುಕಾರ್ಗೆ ಸಚಿವ ಸ್ಥಾನ ಕೈ ತಪ್ಪುವಂತೆ ಮಾಡ್ತಾರಾ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಸಾಹುಕಾರ್ ವಿರುದ್ಧ ಸೋಲಿನ ಸೇಡು..?
- ತಂತ್ರ 1 : ತನ್ನ ಸೋಲಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್
- ತಂತ್ರ 2 : ಈ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಮನವಿ
- ತಂತ್ರ 3 : ಬೆಳಗಾವಿಗೆ ಭೇಟಿ ನೀಡಲಿರುವ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್
- ತಂತ್ರ 4 : ಈ ಸಂದರ್ಭವನ್ನ ಉಪಯೋಗಿಸಿಕೊಳ್ಳಲು ಕವಟಗಿಮಠ ತೆರೆಮರೆ ಪ್ಲಾನ್
- ತಂತ್ರ 5 : ಪಕ್ಷ ವಿರೋಧಿ ಚಟುವಟಿಕೆ ಎಂದು ಆರೋಪಿಸುವ ಚಿಂತನೆ
- ತಂತ್ರ 6 : ಸಂಪುಟ ಪುನಾರಚನೆ ವೇಳೆ ದೂರು ನೀಡಿದ್ರೆ ಸ್ಥಾನ ಕೈ ತಪ್ಪುವ ಸಾಧ್ಯತೆ
ಒಟ್ಟಾರೆ ಬೃಹತ್ ಸಂಕಟದಿಂದ ಈಗಷ್ಟೇ ಚೇತರಿಸಿಕೊಂಡು ಬಂದು ಸಚಿವ ಸ್ಥಾನ ನೀರಿಕ್ಷೆಯಲ್ಲಿದ್ದ ಸಾಹುಕಾರ್ಗೆ ಶಿಸ್ತು ಉಲ್ಲಂಘನೆಯ ಅಸ್ತ್ರ ಮುಳುವಾಗುವ ಭೀತಿ ಎದುರಾಗಿದೆ. ಪರಿಷತ್ ಚುನಾವಣೆಯಲ್ಲಿ ಸಹೋದರನನ್ನು ಗೆಲ್ಲಿಸಿಕೊಂಡು ಬಂದಿದ್ದ ಸಾಹುಕಾರ್ಗೆ, ಸಹೋದರನ ಗೆಲುವೆ ಸಂಕಷ್ಟ ತಂದೊಡ್ಡುವಂತಾಗಿದೆ. ಒಂದೊಮ್ಮೆ ಸಾಹುಕಾರ್ಗೆ ಇದೇ ಕಾರಣದಿಂದ ಈ ಬಾರಿಯೂ ಸಚಿವ ಸ್ಥಾನ ಮಿಸ್ ಆಗಿದ್ದೇ ಆದ್ರೆ ಸಾಹುಕಾರ್ ಮುಂದಿನ ನಡೆ ಏನು ಅನ್ನೋದೆ ಕುತೂಹಲ ಮೂಡಿಸಿದೆ.
The post ಮತ್ತೆ ಸಚಿವರಾಗುವ ಕನಸು ಭಗ್ನ..? ಸಾಹುಕಾರ್ ಮೇಲೆ ‘ಅಶಿಸ್ತಿನ’ ತೂಗುಕತ್ತಿ..! appeared first on News First Kannada.