– ಜಿಲ್ಲೆಯ 826 ಗ್ರಾಮಗಳು ಕೊರೊನಾ ಮುಕ್ತ

ಕೋಲಾರ: ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ನಾಲ್ಕು ದಿನಗಳ ಕಾಲ ಕಂಪ್ಲೀಟ್ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈ ಹಿಂದೆ ಮಾಡಿದ್ದ ಕಠಿಣ ಲಾಕ್‍ಡೌನ್ ನಿಂದ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ತೀವ್ರ ಕಡಿಮೆಯಾಗಿದೆ. ಹಾಗಾಗಿ ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸುತ್ತಾ ಕೋಲಾರದಲ್ಲಿ ಮತ್ತೆ ಕಂಪ್ಲೀಟ್ ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಗಿದೆ ಕೋಲಾರದಲ್ಲಿ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ರು.

ಕೋಲಾರದ ಜಿಲ್ಲಾ ಅರೋಗ್ಯಾಧಿಕಾರಿಗಳ ಕಚೇರಿ ಬಳಿ ಆಕ್ಸಿಜನ್ ಬಸ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ಲಿಂಬಾವಳಿ, ನಾಲ್ಕು ದಿನದ ಕಂಪ್ಲೀಟ್ ಲಾಕ್‍ಡೌನ್‍ಗೆ ಜನರ ಉತ್ತಮ ಸ್ಪಂದನೆ ಸಿಕ್ಕಿದೆ. ಇದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದೆ.

ತಜ್ಞರ ಸಭೆಯಲ್ಲೆ ಮತ್ತೆ ಲಾಕ್‍ಡೌನ್ ಮಾಡುವ ಕುರಿತು ಪ್ರಸ್ತಾಪಗಳು ಬಂದಿವೆ. ಹಾಗಾಗಿ ಮತ್ತೆ ನಾಲ್ಕು ದಿನ ಲಾಕ್‍ಡೌನ್ ಮಾಡಲು ತೀರ್ಮಾನ ಮಾಡಲಾಗಿದೆ. ಇದು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳ ಅಪೇಕ್ಷೆ ಸಹ ಇದಾಗಿದೆ. ಸೇನೆಗೆ ಸಂಬಂಧಿಸಿದ ಕೈಗಾರಿಕೆಗಳು ಹಾಗೂ ಎಪಿಎಂಸಿಗಳಿಗೆ ಮಾತ್ರ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಅವಕಾಶ ನೀಡಲಾಗುವುದು, ಉಳಿದಂತೆ ಎಲ್ಲವೂ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದ್ರು.

826 ಗ್ರಾಮಗಳು ಕೊರೊನಾ ಮುಕ್ತ:
ಕೋಲಾರ ಜಿಲ್ಲೆಯ 1853 ಗ್ರಾಮಗಳಲ್ಲಿ 826 ಗ್ರಾಮಗಳು ಕೊರೊನಾ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಂದು ತಿಂಗಳ ಒಳಗಾಗಿ ಒಂದು ಸೋಂಕಿನ ಪ್ರಕರಣ ಇಲ್ಲದಂತೆ ಕಾಪಾಡಿಕೊಂಡ ಪಂಚಾಯತಗಳಿಗೆ ಕೊರೊನಾ ಮುಕ್ತ ಗ್ರಾಮ ಪಂಚಾಯತಿ ಮಾಡಲು ಶ್ರಮಿಸಿದವರಿಗೆ ಪ್ರೋತ್ಸಾಹ ಧನ ನೀಡಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಲಾಗಿದೆ. ಅದರಂತೆ ನೂರರಷ್ಟು ವ್ಯಾಕ್ಸಿನ್ ಮಾಡುವ ಗ್ರಾಮ ಪಂಚಾಯತಗಳಿಗೂ ಪ್ರೋತ್ಸಾಹ ಧನ ಹಾಗೂ ಪ್ರಶಂಸಾ ಪತ್ರ ನೀಡಲು ಜಿಲ್ಲಾಡಳಿತ ನಿರ್ಧಾರ ಮಾಡಲಾಗಿದೆ.

ಇನ್ನೂ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಸರ್ಕಾರವನ್ನ ಮನವಿ ಮಾಡಿದ್ದು ಅದರಂತೆ ಕುವೈತ್ ಸರ್ಕಾರ ನೀಡುತ್ತಿರುವ ಆಕ್ಸಿಜನ್ ನಲ್ಲಿ 20 ಟನ್ ಆಕ್ಸಿಜನ್‍ನ್ನು ಕೋಲಾರಕ್ಕೆ ನೀಡಲು ಸರ್ಕಾರ ತೀರ್ಮಾನಿಸಿದೆ. ನಮ್ಮ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದು ಹೇಳಿದ್ರು. ಇನ್ನೂ ಆಕ್ಸಿಜನ್ ಬ್ಯಾಂಕ್ ಉದ್ಘಾಟನೆಗೂ ಮುನ್ನ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲೆಯ ಕೊರೊನಾ ಸೋಂಕು ತಡೆಗಟ್ಟುವ ಕುರಿತು ಅರವಿಂದ್ ಲಿಂಬಾವಳಿ ಮಾಹಿತಿ ಸಂಗ್ರಹಿಸಿದ್ರು.

The post ಮತ್ತೆ 4 ದಿನ ಕೋಲಾರ ಕಂಪ್ಲೀಟ್ ಲಾಕ್‍ಡೌನ್: ಅರವಿಂದ್ ಲಿಂಬಾವಳಿ appeared first on Public TV.

Source: publictv.in

Source link