ಬೆಂಗಳೂರು: ಆರು ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್​​ಡೌನ್​ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಮಾಲ್​ಗಳನ್ನು ಹೊರತುಪಡಿಸಿ.. ಹೋಟೆಲ್​ಗಳು, ರೆಸ್ಟೋರೆಂಟ್​ಗಳು, ಬಾರ್​ ಮತ್ತು ಕ್ಲಬ್​ಗಳನ್ನೂ ತೆರೆಯಲು ಆದೇಶ ಹೊರಡಿಸಲಾಗಿದೆ.

ಈ ಜಿಲ್ಲೆಗಳಲ್ಲಿ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಹಿನ್ನೆಲೆ ಲಾಕ್​ಡೌನ್​ ಸಡಿಲಿಕೆ ​ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

The post ಮತ್ತೆ 6 ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿದ ರಾಜ್ಯ ಸರ್ಕಾರ.. ಯಾವ ಜಿಲ್ಲೆಗಳು..? appeared first on News First Kannada.

Source: newsfirstlive.com

Source link