ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕಳೆದ ಕೆಲ ಎರಡು ವರ್ಷಗಳಿಂದ ತಮ್ಮ ಸ್ಟಾಂಡರ್ಡ್ಗೆ ತಕ್ಕಂತೆ ಆಡ್ತಿಲ್ಲ. ಆದ್ರೂ, ಪ್ರತಿ ಪಂದ್ಯದಲ್ಲೂ ಕೊಹ್ಲಿ ಒಂದಲ್ಲ ಒಂದು ದಾಖಲೆ ಬರೀತಾನೆ ಇದ್ದಾರೆ. ಇಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟಿ-20 ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ಕೊಹ್ಲಿ ರೆಡಿಯಾಗಿದ್ದಾರೆ.
ಇವತ್ತಿನ ಪಂದ್ಯದಲ್ಲಿ ಕೊಹ್ಲಿ 73 ರನ್ ಗಳಿಸಿದ್ರೆ, ಅಂತಾರಾಷ್ಟ್ರೀಯ ಟಿ-20 ಮಾದರಿಯಲ್ಲಿ ಅತಿಹೆಚ್ಚು ರನ್ಗಳಿಸಿದ ಆಟಗಾರ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈ ಲಿಸ್ಟ್ನಲ್ಲಿ ಸದ್ಯ ಗಪ್ಟಿಲ್ ಮೊದಲ ಸ್ಥಾನದಲ್ಲಿದ್ದು, 112 ಟಿ-20 ಪಂದ್ಯಗಳನ್ನಾಡಿರೋ ಗಪ್ಟಿಲ್, 3299 ರನ್ಸ್ ಗಳಿಸಿದ್ದಾರೆ.
ಇನ್ನು 95 ಚುಟಕು ಪಂದ್ಯಗಳಿಂದ ವಿರಾಟ್ ಕೊಹ್ಲಿ 3227 ರನ್ ದಾಖಲಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಆರನ್ ಫಿಂಚ್, ನ್ಯೂಜಿಲೆಂಡ್ನ ಪಾಲ್ ಸ್ಟಿಲಿಂಗ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.