ಮತ್ತೊಂದು ಸಾಧನೆ ಮಾಡಿದ ವಿರಾಟ್​ ಕೊಹ್ಲಿ..!


ಅಹಮದಾಬಾದ್‌ನಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆಡೋದ್ರೊಂದಿಗೆ ವಿರಾಟ್ ಕೊಹ್ಲಿ ನೂತನ ಮೈಲಿಗಲ್ಲು ತಲುಪಿದ್ರು. ಈ ಪಂದ್ಯದಲ್ಲಿ ಕಣಕ್ಕಿಳಿದ ಕೊಹ್ಲಿ, ತವರಿನಲ್ಲಿ 100ನೇ ಏಕದಿನ ಪಂದ್ಯವನ್ನಾಡಿದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ ವಿರಾಟ್​, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಬಳಿಕ ತವರಿನಲ್ಲಿ 100 ಏಕದಿನ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು. ಆದ್ರೆ, ಈ ಸ್ಮರಣೀಯ ಪಂದ್ಯದಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟುವಲ್ಲಿ ಕೊಹ್ಲಿ ಎಡವಿದ್ರು.

30 ಎಸೆತಗಳನ್ನ ಎದುರಿಸಿ ಕೇವಲ 18 ರನ್​ಗಳಿಸಿ ಔಟಾದ್ರು. ಈವರೆಗೆ ಕೊಹ್ಲಿ ಒಟ್ಟು 259 ಏಕದಿನ ಪಂದ್ಯಗಳನ್ನು ಆಡಿದ್ದು, 12,311 ರನ್ ಗಳಿಸಿದ್ದಾರೆ.

News First Live Kannada


Leave a Reply

Your email address will not be published.