ಇತ್ತೀಚಿಗಷ್ಟೇ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮೀ or ಹೇಟ್​ ಮೀ ಅನ್ನೋ ಟೈಟಲ್​ನ ಹೊಸ ಚಿತ್ರವನ್ನ ಅನೌನ್ಸ್​ ಮಾಡಿದ್ದರು. ಈ ಚಿತ್ರ ಸೆಟ್ಟೇರೋಕೂ ಮುಂಚೇನೆ ಚಿತ್ರದ ಟೈಟಲ್ ಸದ್ಯ ವಿವಾದಕ್ಕೆ ಸಿಲುಕಿದೆ. ಅರೆ.. ಇದೇನಿದು ‘ಲವ್ ಮೀ or ಹೇಟ್​ ಮೀ’ ಟೈಟಲ್​ನಲ್ಲಿ ಈಗಾಗಲೇ ನಮ್ಮ ಸಿನಿಮಾ ಮುಹೂರ್ತ ನೆರವೇರಿದೆ. ಹೀಗಿರುವಾಗ ‘ಲವ್ ಮೀ or ಹೇಟ್​ ಮೀ’ ಟೈಟಲ್​ನ ಹೇಗೆ ಬಳಸ್ತಾರೆ ಅಂತ ನಿರ್ದೇಶಕ ವಿ. ದೇವದತ್,​ ರಚಿತಾ ಹಾಗೂ ಡಾರ್ಲಿಂಗ್​ ಕೃಷ್ಣ ಚಿತ್ರದ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

ಈ ಹಿಂದೆ ‘ಸೈಕೋ’ ಚಿತ್ರ ನಿರ್ದೇಶನ ಮಾಡಿದ್ದ ದೇವದತ್​ ‘ಲವ್ ಮೀ​ or ಹೇಟ್ ಮೀ’ಟೈಟಲ್​ನ ಶ್ರೀ ವೆಂಕಟೇಶ್ವರ ಇಂಟರ್​ನ್ಯಾಷನಲ್ ಬ್ಯಾನರ್​ನಡಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಚಿತ್ರದ ಸ್ಕ್ರೀಪ್ಟ್ ವರ್ಕ್ ಕಂಪ್ಲೀಟ್ ಮಾಡಿ ಶೂಟಿಂಗ್ ಶುರು ಮಾಡಲು ಎಲ್ಲಾ ರೀತಿಯಲ್ಲೂ ತಯಾರಿ ಮಾಡಿಕೊಂಡಿದ್ದರಂತೆ. ಅದ್ರೆ ಮತ್ತೆ ಲಾಕ್​ಡೌನ್ ಆದ ಕಾರಣ ಚಿತ್ರದ ಶೂಟಿಂಗ್ ಶುರು ಮಾಡಲು ಆಗಿಲ್ಲ. ಈ ಗ್ಯಾಫ್​ನಲ್ಲಿ ಆಕ್ಷನ್​ ಕಟ್ ಎಂಟರ್ಟೈನ್ಮೆಂಟ್ ಬ್ಯಾನರ್​ನಲ್ಲಿ ಇದೇ ಟೈಟಲ್​ನಲ್ಲಿ ರಚಿತಾ ಹಾಗೂ ಡಾರ್ಲಿಂಗ್​ ಕೃಷ್ಣ ಸಿನಿಮಾ ಅನೌನ್ಸ್​ ಮಾಡಲಾಗಿದೆ. ‘ನಮ್ಮ ಸಂಸ್ಥೆಯಲ್ಲಿ ರಿಜಿಸ್ಟರ್ ಆಗಿರುವ ಟೈಟಲ್​ನ ಅವರು ಬಳಕೆ ಮಾಡಲು ಹೇಗೆ ಸಾಧ್ಯ? ಲಾಕ್​ಡೌನ್ ಮುಗಿದ ಬಳಿಕ ಈ ಬಗ್ಗೆ ವಾಣಿಜ್ಯ ಮಂಡಳಿ ಗಮನಕ್ಕೆ ತರುವುದಾಗಿ’ ನಿರ್ದೇಶಕ ವಿ. ದೇವದತ್​ಇದೀಗ ನ್ಯೂಸ್​ ಫಸ್ಟ್​ಗೆ ತಿಳಿಸಿದ್ದಾರೆ.

ಇನ್ನು ರಚಿತಾ ರಾಮ್ ಚಿತ್ರಕ್ಕೆ ಟೈಟಲ್​ ಕಾಂಟ್ರವರ್ಸಿ ಇದು ಹೊಸದೇನಲ್ಲ. ಈ ಹಿಂದೆಯೂ ರಚಿತಾ ರಾಮ್ ಲೀಡ್​ ರೋಲ್​ನಲ್ಲಿ ನಟಿಸಬೇಕಿದ್ದ ‘ಕಸ್ತೂರಿ ನಿವಾಸ’ ಚಿತ್ರದ ಟೈಟಲ್​ ಕೂಡ ವಿವಾದಕ್ಕೆ ಸಿಲುಕಿತ್ತು. ಆ ಬಳಿಕ ‘ ಕಸ್ತೂರಿ ನಿವಾಸ’ ಚಿತ್ರದ ಟೈಟಲ್​ ‘ ಕಸ್ತೂರಿ ಮಹಲ್’ ಅಂತ ಬದಲಾಯಿಸಿದ್ರು ನಿರ್ದೇಶಕ ದಿನೇಶ್​ ಬಾಬು. ಆದ್ರೆ ಕಾರಣಾಂತರದಿಂದ ರಚಿತಾ ‘ಕಸ್ತೂರಿ ಮಹಲ್’ ಚಿತ್ರದಿಂದ ಹೊರಬಂದಿದ್ರು. ಈಗ ಅದೇ ರೀತಿ ಶೂಟಿಂಗ್ ಶುರುವಾಗುವ ಮುನ್ನವೇ‘ಲವ್ ಮೀ​ or ಹೇಟ್ ಮೀ’ ಟೈಟಲ್ ವಿವಾದಕ್ಕೆ ಸಿಲುಕಿದೆ. ಈ ಚಿತ್ರದ ಟೈಟಲ್ ಕೂಡ ‘ಕಸ್ತೂರಿ ಮಹಲ್’ ಚಿತ್ರದಂತೆ ಬದಲಾಗುತ್ತಾ? ಇಲ್ಲ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ತಾರಾ ಕಾದು ನೋಡಬೇಕು.

 

The post ಮತ್ತೊಮ್ಮೆ ಡಿಂಪಲ್ ಕ್ವೀನ್ ಬೆನ್ನು ಬಿದ್ದ ಟೈಟಲ್ ಕಾಂಟ್ರವರ್ಸಿ appeared first on News First Kannada.

Source: newsfirstlive.com

Source link