ಚೆನ್ನೈ: ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ನಟಿ ಖುಷ್ಬು ಸುಂದರ್​​ ಟ್ವಿಟ್ಟರ್​​​​ ಖಾತೆ ಮತ್ತೊಮ್ಮೆ ಹ್ಯಾಕ್​​ ಆಗಿದೆಯಂತೆ. ತನ್ನ ಟ್ವಿಟ್ಟರ್​​ ಹ್ಯಾಕ್​​ ಬಗ್ಗೆ ಖುದ್ದು ಖುಷ್ಬು ಸುಂದರ್​ ಅವರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿಯೇ ಕಳೆದ ಕೆಲವು ದಿನಗಳಲ್ಲಿ ತನ್ನ ಖಾತೆಯಿಂದ ಯಾವುದೇ ಟ್ವೀಟ್ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಖುಷ್ಬು.. ನನ್ನ ಟ್ವಿಟ್ಟರ್ ಖಾತೆ ಮೂರು ದಿನಗಳ ಹಿಂದೆ ಹ್ಯಾಕ್​ ಆಗಿದೆ. ನನ್ನ ಟ್ವಿಟ್ಟರ್​​ ಹ್ಯಾಕಿಂಗ್​​​ ಸಂಬಂಧ ಟ್ವಿಟ್ಟರ್ ಆಡಳಿತ ಕಚೇರಿಗೆ ದೂರು ನೀಡಿದ್ದೇನೆ. ಮುಂದಿನ 48 ಗಂಟೆಗಳಲ್ಲಿ ಟ್ವಿಟ್ಟರ್​​ ಖಾತೆ ಮರುಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಕಳೆದ ಶುಕ್ರವಾರದಿಂದ ನನಗೆ ನನ್ನ ಅಕೌಂಟ್ ಆ್ಯಕ್ಸಿಸ್ ಮಾಡಲಾಗುತ್ತಿಲ್ಲ.. ಬೇರೆ ಯಾರಾದರೂ ಅದನ್ನ ದುರ್ಬಳಕೆ ಮಾಡಿಕೊಳುತ್ತಾರೆ ಎಂಬ ಆತಂಕವಿದೆ. ನನ್ನ ಅಕೌಂಟ್​ನಿಂದ 2-3 ಸಂದೇಶಗಳು ರವಾನೆಯಾಗಿವೆ.. ಅದರಲ್ಲಿ ಒಂದು ಫ್ರೀ ಇಂಡಿಯಾ ಎಂದು ಇದೆ.. ಇದು ನಾನು ಮಾಡಿದ್ದಲ್ಲ.. ನನ್ನ ಹೆಸರು ಮತ್ತು ಡಿಪಿ ಕೂಡ ಚೇಂಜ್ ಆಗಿದೆ ಎಂದಿದ್ದಾರೆ.

The post ಮತ್ತೊಮ್ಮೆ ಹ್ಯಾಕ್​ ಆಯ್ತು ಬಿಜೆಪಿ ನಾಯಕಿ ಖುಷ್ಬು ಸುಂದರ್​​ ಟ್ವಿಟ್ಟರ್​​ ಅಕೌಂಟ್​​ appeared first on News First Kannada.

Source: newsfirstlive.com

Source link