ಇತ್ತೀಚೆಗಷ್ಟೆ ತಮಿಳು ಚಿತ್ರರಂಗದ ಹಾಸ್ಯ ನಟರಲ್ಲಿ ಒಬ್ಬರಾದ ವಿವೇಕ್​​ ಹೃದಯಾಘಾತದಿಂದ ನಿಧನರಾದ್ರು. ಈ ಬಾರಿ ಕೊರೊನಾ ತಮಿಳು ಚಿತ್ರರಂಗಕ್ಕೆ ಶಾಕ್​ ನೀಡಿದೆ. ತಮಿಳಿನ ಮತ್ತೋರ್ವ ಹಾಸ್ಯ ನಟ ಕೊರೊನಾ ಕಾರಣ ಕೊನೆಯುಸಿರೆಳೆದಿದ್ದಾರೆ. 74 ವರ್ಷದ ಹಾಸ್ಯನಟ ಪಾಂಡು ಕೊರೊನಾದಿಂದ ಸಾವನ್ನಪ್ಪಿದವರು.

ಇಂದು ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಪಾಂಡು ನಿಧನರಾಗಿದ್ದಾರೆ. 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನ ರಂಜಿಸಿರುವ ನಟ ಪಾಂಡು ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಪಾಂಡು ಪತ್ನಿ ಕುಮುದಾ ರಿಪೋರ್ಟ್​ ಕೂಡ ಅದೇ ಸಮಯಕ್ಕೆ ಪಾಸಿಟಿವ್​ ಬಂದಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳು ಚಿತ್ರರಂಗದ ನಟರು, ನಿರ್ದೇಶಕರು ಸಂತಾಪ ಸೂಚಿಸ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ನಮ್ಮವರ ಸಾವಿನ ಸುದ್ದಿ ಪದೇ ಪದೇ ನೋಡೋದಕ್ಕೆ ಕಷ್ಟವಾಗ್ತಿದೆ ಅನ್ನೋ ಕ್ಯಾಪ್ಶನ್​ಗಳನ್ನ ಬಳಸುತ್ತಿದ್ದಾರೆ.

The post ಮತ್ತೋರ್ವ ತಮಿಳು ಹಾಸ್ಯ ನಟ ಕೊರೊನಾದಿಂದ ಸಾವು appeared first on News First Kannada.

Source: newsfirstlive.com

Source link