ಚಿತ್ರದುರ್ಗ: ಮದಕರಿ ನಾಯಕರ ವಂಶಸ್ಥರಾಗಿದ್ದ ಸಿ.ಪಿ.ರಾಜಣ್ಣ ಅವರು ಕೊರೊನಾದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಕೊರೊನಾ ಸೋಂಕಿನಿಂದಾಗಿ ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಿತ್ರದುರ್ಗ ಮುರುಘಾಮಠದೊಂದಿಗೆ ನಿರಂತರ ಅವಿನಾಭಾವ ಸಂಬಂಧಹೊಂದಿದ್ದ ಸಿ.ಪಿ. ರಾಜಣ್ಣನವರ ನಿಧನಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಅಗಲಿಕೆಯಿಂದಾಗಿ ಕುಟುಂಬ ವರ್ಗದವರಲ್ಲಿ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಬಸವವಾದಿ ಪ್ರಮಥರು ನೀಡಲಿ ಎಂದು ಹೇಳಿದ್ದಾರೆ.

ಪ್ರತೀ ವರ್ಷ ದಸರಾ ವೇಳೆ ನಡೆಯುವ ಶರಣಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ಮದಕರಿನಾಯಕ ವಂಶಸ್ಥರು ಚಿತ್ರದುರ್ಗದ ಕೋಟೆಯಲ್ಲಿರುವ ಹಳೆಯ ಮುರುಘಾಮಠದ ಬಳಿ ಮುರುಘಾಶ್ರೀಗಳಿಗೆ ಭಕ್ತಿ ಸಮರ್ಪಣೆ ಮಾಡುತ್ತಾ ಬಂದಿರುವುದು ಸಂಪ್ರದಾಯ. ಈ ಸಂಪ್ರದಾಯ ಈಗಲೂ ಮುಂದುವರೆದಿದ್ದು, ಮುರುಘಾಮಠದೊಂದಿಗೆ ಅದೇ ಸಂಬಂಧವನ್ನು ಮದಕರಿನಾಯಕ ವಂಶಸ್ಥರು ಇರಿಸಿಕೊಂಡಿದ್ದಾರೆ.

The post ಮದಕರಿ ನಾಯಕರ ವಂಶಸ್ಥ ಸಿ.ಪಿ.ರಾಜಣ್ಣ ಕೊರೊನಾದಿಂದ ನಿಧನ   appeared first on News First Kannada.

Source: newsfirstlive.com

Source link