‘ಮದಗಜ’ನ ಕ್ರೌರ್ಯದ ಹಿಂದಿದ್ಯಾ ತಾಯಿ-ಮಗನ ಮನ ಮಿಡಿಯುವ ಕಥೆ?


ಆತ ಎಷ್ಟೇ ಕಟೋರನಾಗಿದ್ದರು, ಮಾಸ್ ವ್ಯಕ್ತಿತ್ವದನಾಗಿದ್ದರು, ಅವನಲ್ಲು ಪ್ರೀತಿ, ಅವನಲ್ಲೂ ಮಮತೆ ಮಮಕಾರ ಇದ್ದೇ ಇರುತ್ತೆ.. ಮೇಲ್ನೋಟಕ್ಕೆ ಪಕ್ಕಾ ಮಾಸ್ ಸಿನಿಮಾದಂತೆ ಕಾಣುತ್ತಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಮದಗಜ ಸಿನಿಮಾದೊಳೆಗೆ ಒಂದು ಮಮಕಾರವಿದ್ದಂತೆ ಮನಮಿಡಿಯುವ ಕಥೆ ಇದ್ದಂತೆ ಕಾಣುತ್ತಿದೆ

ನಮಗ್ಯಾಕೆ ಈ ಡೌಟ್ ಬಂತು ಅನ್ನೋದಕ್ಕೆ ಕಾರಣ ಹಾಡು. ನೀವು ಆ ಹಾಡನ್ನ ನೋಡಿ ನಿಮಗೂ ನಮಗೆ ಬಂದ ಡೌಟೇ ಬರಬಹುದು.ನಗುತಾ ತಾಯಿ, ಹಡೆದಾ ಕೂಸು, ಬೇರಾಯಿತೆ ಕರುಳ ದಾರಿ.. ಲಾಲಿ ಹಾಡಿ ಜೋಳಿಗೆ ತೂಗೋದು ಪರರಾ ಪಾಲಾಯ್ತೆ ಕೈ ಜಾರಿ. ಇದು ಮಾಸ್ ಎಂಟರ್​​ಟೈನ್ಮೆಂಟ್ ನಂತೆ ಪ್ರಜ್ವಲಿಸುತ್ತಿರುವ ಮದಗಜ ಸಿನಿಮಾದ ಮದರ್ ಸೆಂಟಿಮೆಂಟ್ ಸಾಂಗ್​ನ ಸಾಲುಗಳು.

ಮೊದಲು ಒಂದು ಡ್ಯುಯೆಟ್ ಸಾಂಗ್ , ನಂತರ ಒಂದು ಜಬರ್​​ದಸ್ತ್ ಮಾಸ್ ಸಾಂಗ್ ಅನ್ನ ಬಿಟ್ಟು ಪ್ರೇಕ್ಷಕರ ಎದೆಯೋಳಗೆ ನಿರೀಕ್ಷೆಯ ಕಿಚ್ಚನ್ನ ಹತ್ತಿಸಿದ ಮದಗಜ ಸಿನಿಮಾ ಬಳಗ ಈಗ ತಾಯಿ ಬಗ್ಗೆ ಹಾಡೊಂದನ್ನ ಹೊರ ಬಿಟ್ಟಿದೆ.

‘ಮದಗಜ’ನೋಳ್ ಮನ ಮಿಡಿಯುವ ಕಥೆ
ಮದಗಜ ಚಿತ್ರದಲ್ಲಿ ತಾಯಿ-ಮಗ ಬೇರಾಗೋದ್ಯಾಕೆ..?

ಆತ ಎಷ್ಟೇ ಕಟೋರನಾಗಿದ್ದರು, ಮಾಸ್ ವ್ಯಕ್ತಿತ್ವದನಾಗಿದ್ದರು, ಅವನಲ್ಲು ಪ್ರೀತಿ, ಅವನಲ್ಲೂ ಮಮತೆ ಮಮಕಾರ ಇದ್ದೇ ಇರುತ್ತೆ.. ಮೇಲ್ನೋಟಕ್ಕೆ ಪಕ್ಕಾ ಮಾಸ್ ಸಿನಿಮಾದಂತೆ ಕಾಣುತ್ತಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಮದಗಜ ಸಿನಿಮಾದೊಳೆಗೆ ಒಂದು ಮಮಕಾರವಿದ್ದಂತೆ ಮನಮಿಡಿಯುವ ಕಥೆ ಇದ್ದಂತೆ ಕಾಣುತ್ತಿದೆ.. ರವಿ ಬಸ್ರೂರ್ ಸಂಗೀತ ಹಾಗೂ ಸಾಹಿತ್ಯದಲ್ಲಿ ಸಂತೋಷ್ ವೆಂಕಿ ಗಾಯನದಲ್ಲಿ ಮದಗಜ ಮದರ್ ಸೆಂಟಿಮೆಂಟ್ ಸಾಂಗ್ ಮೂಡಿಬಂದಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಅಭಿಮಾನಿಗಳು ಕಾತುರತೆಯಿಂದ ಕಾದಿರುವ ಸಿನಿಮಾ ಮದಗಜ.. ಅಯೋಗ್ಯ ಸಿನಿಮಾದ ನಂತರ ಮಹೇಶ್ ಕುಮಾರ್ ಒಂದು ಬಿಗ್ ಬಜೇಟ್ ಮಾಸ್ ಆ್ಯಕ್ಷನ್ ಎಂಟರ್​​ಟೈನ್ಮೆಂಟ್​ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸ್ಯಾಂಡಲ್​ವುಡ್​​ನಲ್ಲಿ ಸಿನಿಮಾ ಫ್ಯಾಷನ್ ಇರೋ ನಿರ್ಮಾಪಕರಲ್ಲೊಬ್ಬರಾಗಿರುವ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಒಂದು ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಸೃಷ್ಟಿಸಿ ಬನ್ನಿ ಬನ್ನಿ ಎಂದು ಚಿತ್ರಮಂದಿರಕ್ಕೆ ಸ್ವಾಗತಿಸಲು ಏನೇನ್ ಬೇಕೋ ಎಲ್ಲಾ ರೀತಿಯ ಕೌತುಕ ಕಂಟೆಂಟ್ ಮದಗಜನಿಂದ ರೀವಿಲ್ ಆಗಿದೆ. ಭಾರಿ ನಿರೀಕ್ಷೆಯ ಭಾರವನ್ನ ಹೊತ್ತಿರುವ ಮದಗಜ ಸಿನಿಮಾ ಡಿಸೆಂಬರ್ 3ನೇ ತಾರೀಖ್ ಅಂದ್ರೇ ಇದೇ ವಾರದ ಶುಕ್ರವಾರದ ದಿನದಂದು ನಿಮ್ಮಮುಂದೆ ಬರುತ್ತಿದೆ ವೆಟ್ ಆಂಡ್ ವಾಚ್.

News First Live Kannada


Leave a Reply

Your email address will not be published. Required fields are marked *