‘ಮದಗಜ’ ಗ್ರ್ಯಾಂಡ್​ ರಿಲೀಸ್​; ಶ್ರೀಮುರಳಿ ನಟನೆಯ ಈ ಚಿತ್ರ ನೋಡಲು ಇಲ್ಲಿದೆ 5 ಕಾರಣ | Madhagaja Movie release: 5 reasons to watch Sri Murali Ashika Ranganath film Madhagaja


‘ಮದಗಜ’ ಗ್ರ್ಯಾಂಡ್​ ರಿಲೀಸ್​; ಶ್ರೀಮುರಳಿ ನಟನೆಯ ಈ ಚಿತ್ರ ನೋಡಲು ಇಲ್ಲಿದೆ 5 ಕಾರಣ

ಮದಗಜ ಚಿತ್ರದಲ್ಲಿ ಶ್ರೀಮುರಳಿ, ಆಶಿಕಾ ರಂಗನಾಥ್

ನಟ ‘ರೋರಿಂಗ್​ ಸ್ಟಾರ್​’ ಶ್ರೀಮುರಳಿ (Sri Murali) ಅಭಿಮಾನಿಗಳಿಗೆ ಇಂದು (ಡಿ.3) ನಿಜಕ್ಕೂ ಹಬ್ಬ. ರಾಜ್ಯಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅದಕ್ಕೆ ಕಾರಣ ಆಗಿರುವುದು ‘ಮದಗಜ’ ಸಿನಿಮಾ (Madhagaja Movie) ರಿಲೀಸ್​. ಅದ್ದೂರಿ ಬಜೆಟ್​ನಲ್ಲಿ ಮೂಡಿಬಂದಿರುವ ಈ ಸಿನಿಮಾ ಇಂದು ಎಲ್ಲೆಡೆ ತೆರೆಕಾಣುತ್ತಿದೆ. ಆಶಿಕಾ ರಂಗನಾಥ್​ (Ashika Ranganath) ಮತ್ತು ಶ್ರೀಮುರಳಿ (Sriimurali) ಜೋಡಿಯಾಗಿ ನಟಿಸಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಿರ್ದೇಶಕ ಮಹೇಶ್​ ಕುಮಾರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ (Umapathy Srinivas Gowda) ಅವರ ಕಾಂಬಿನೇಷನ್​ನಲ್ಲಿ ‘ಮದಗಜ’ ಮೂಡಿಬಂದಿದೆ. ಮೊದಲ ದಿನ ಈ ಸಿನಿಮಾಗೆ ಗ್ರ್ಯಾಂಡ್​ ಓಪನಿಂಗ್​ ಸಿಗುತ್ತಿದೆ. ಅನೇಕ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜ’ ಸಿನಿಮಾ ನೋಡಲು ಇರುವ 5 ಮುಖ್ಯ ಕಾರಣಗಳೇನು? ಇಲ್ಲಿದೆ ವಿವರ.. 

 

ಕಾರಣ ಒಂದು:

ಶ್ರೀಮುರಳಿ ಭರ್ಜರಿ ಆ್ಯಕ್ಷನ್​ ಮತ್ತು ಎಮೋಷನ್​

‘ಉಗ್ರಂ’ ಸಿನಿಮಾ ಗೆದ್ದ ಬಳಿಕ ಶ್ರೀಮುರಳಿ ಅವರು ಆ್ಯಕ್ಷನ್​ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ‘ಮದಗಜ’ ಚಿತ್ರದಲ್ಲೂ ಭರ್ಜರಿ ಸಾಹಸ ದೃಶ್ಯಗಳಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಆ ಕಾರಣದಿಂದ ಅವರ ಅಭಿಮಾನಿಗಳಿಗೆ ಸಖತ್​ ಮನರಂಜನೆ ಸಿಗಲಿದೆ. ಬರೀ ಆ್ಯಕ್ಷನ್​ ಮಾತ್ರವಲ್ಲದೇ ತಾಯಿ ಸೆಂಟಿಮೆಂಟ್​ ಕೂಡ ಈ ಚಿತ್ರದಲ್ಲಿ ಹೈಲೈಟ್​ ಆಗಿದೆ.

ಕಾರಣ ಎರಡು:

ಬಹುಕೋಟಿ ಬಂಡವಾಳ ಹೂಡಿದ ನಿರ್ಮಾಪಕರು:

ಉಮಾಪತಿ ಶ್ರೀನಿವಾಸ್​ ಗೌಡ ಅವರು ಗಾಂಧಿನಗರದಲ್ಲಿ ಅದ್ದೂರಿ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ‘ರಾಬರ್ಟ್​’ ಸಿನಿಮಾ ನಿರ್ಮಿಸಿ ಭರ್ಜರಿ ಯಶಸ್ಸು ಕಂಡ ಅವರು ಈಗ ‘ಮದಗಜ’ ಚಿತ್ರವನ್ನೂ ಶ್ರೀಮಂತವಾಗಿ ನಿರ್ಮಿಸಿದ್ದಾರೆ. ಬೃಹತ್​ ಸೆಟ್​ಗಳಲ್ಲಿ ಈ ಸಿನಿಮಾ ಚಿತ್ರೀಕರಣಗೊಂಡಿದೆ. ತಾಂತ್ರಿಕ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

ಕಾರಣ ಮೂರು:

ಮಹೇಶ್​ ಕುಮಾರ್ ಭಿನ್ನ ಪ್ರಯತ್ನ:

ಈ ಹಿಂದೆ ನಿರ್ದೇಶಕ ಮಹೇಶ್​ ಕುಮಾರ್ ಅವರು ‘ಅಯೋಗ್ಯ’ ಸಿನಿಮಾ ಮಾಡಿದ್ದರು. ಕಾಮಿಡಿ ಪ್ರಕಾರದಲ್ಲಿ ಆ ಚಿತ್ರವನ್ನು ತೆರೆಗೆ ತಂದಿದ್ದ ಅವರು ಇಂದು ‘ಮದಗಜ’ ಸಿನಿಮಾವನ್ನು ಪಕ್ಕಾ ಆ್ಯಕ್ಷನ್​ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಆ ಕಾರಣದಿಂದಲೂ ‘ಮಗದಜ’ ಸಿನಿಮಾ ನಿರೀಕ್ಷೆ ಸೃಷ್ಟಿಸಿದೆ.

ಕಾರಣ ನಾಲ್ಕು:

ರವಿ ಬಸ್ರೂರು ಮ್ಯೂಸಿಕ್​ ಕಮಾಲ್​:

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಆಗಿರುವ ಸಂಗೀತ ನಿರ್ದೇಶಕರಲ್ಲಿ ರವಿ ಬಸ್ರೂರು ಕೂಡ ಒಬ್ಬರು. ‘ಕೆಜಿಎಫ್​’ ಚಿತ್ರದ ಯಶಸ್ಸಿನ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ‘ಮದಗಜ’ ಚಿತ್ರಕ್ಕೂ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಮಾತ್ರವಲ್ಲದೇ ಹಿನ್ನೆಲೆ ಸಂಗೀತದಲ್ಲೂ ಅಬ್ಬರಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಧೂಳೆಬ್ಬಿಸಿವೆ. ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಲು ಇದು ಕೂಡ ಕಾರಣ ಆಗಿದೆ.

ಕಾರಣ ಐದು:

ಆಶಿಕಾ ಅಭಿಮಾನಿಗಳಿಗೆ ಸರ್ಪ್ರೈಸ್​

ನಟಿ ಆಶಿಕಾ ರಂಗನಾಥ್​ ಅವರು ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದಾರೆ. ಹಳ್ಳಿ ಹುಡುಗಿ ಎಂದ ಮಾತ್ರಕ್ಕೆ ತುಂಬ ಸಾಫ್ಟ್​ ಅಂತೇನೂ ಇಲ್ಲ. ಈ ಸಿನಿಮಾದಲ್ಲಿ ಅವರು ಸಿಗರೇಟ್​ ಸೇರಿದ್ದಾರೆ. ಟ್ರೇಲರ್​ನಲ್ಲಿ ಈಗಾಗಲೇ ಆ ದೃಶ್ಯ ಹೈಲೈಟ್​ ಆಗಿದೆ. ಅದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಒಳ್ಳೆಯ ಮೈಲೇಜ್​ ಸಿಗುವ ನಿರೀಕ್ಷೆ ಇದೆ.

TV9 Kannada


Leave a Reply

Your email address will not be published. Required fields are marked *