ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಬಿಲ್ಡರ್ ಮದನ್ ಕೊಲೆ ಆರೋಪಿಗಳ ಪೈಕಿ ಇಬ್ಬರ ಮೇಲೆ ಜಯನಗರ ಇನ್ಸ್​​ಪೆಕ್ಟರ್ ಸುದರ್ಶನ್ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಆರೋಪಿ ಮಹೇಶ್  ಹಾಗೂ ನವೀನ್ ಗುಂಡೇಟು ತಿಂದವರು.

ತಲಘಟ್ಟಪುರ ಬಳಿ ತುರೆಹಳ್ಳಿ ಫಾರೆಸ್ಟ್​​ನಲ್ಲಿ ಘಟನೆ ನಡೆದಿದೆ. ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ. PSI ಚಂದನ್ ಹಾಗೂ ASI ಲಕ್ಷ್ಮಣ್ ಆಚಾರಿ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ತಿಳಿದುಬಂದಿದೆ. ಹೀಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಅರೆಸ್ಟ್​​ ಮಾಡಿದ್ದಾರೆ.

ಜುಲೈ 2 ರಂದು ಬನಶಂಕರಿ ಮೆಟ್ರೋ ನಿಲ್ದಾಣದ ಕೆಳಗೆ ಫೈನಾನ್ಸಿಯರ್ ಮದನ್ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಯನಗರ ಠಾಣೆ ಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭ ಮಾಡಿದ್ದರು. ನಿನ್ನೆ ಮದನ್ ಕೊಲೆ ಪ್ರಕರಣದ ಏಳು ಆರೋಪಿಗಳು ಕೋರ್ಟ್ ಬಳಿ ವಕೀಲರ ವೇಷದಲ್ಲಿ ಬಂದಿದ್ದರು. ಈ ವೇಳೆ ಪೊಲೀಸರು ಅವರನ್ನ ಅರೆಸ್ಟ್​ ಮಾಡಿದ್ದರು.

ಇದನ್ನೂ ಓದಿ: ವಕೀಲರ ವೇಷ ತೊಟ್ಟು ಕೋರ್ಟ್​ಗೆ ಬಂದ ಮದನ್ ಕೊಲೆ ಆರೋಪಿಗಳು

The post ಮದನ್ ಕೊಲೆ‌ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್ appeared first on News First Kannada.

Source: newsfirstlive.com

Source link