
ಟ್ರಾಕ್ಟರ್ ಓಡಿಸುತ್ತಾ ವಧು ಮದುವೆಗೆ ಬಂದಳು
ಮಧ್ಯಪ್ರದೇಶದ ಬೇತುಲ್ನಲ್ಲಿ ನಡೆದ ಮದುವೆಗೆ ವಧು ಗ್ರ್ಯಾಂಡ್ ಆಗಿ ಟ್ರಾಕ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾಳೆ. ಕೆಂಪು ಬಣ್ಣದ ಬಟ್ಟೆ ಧರಿಸಿ ಮದುವೆಗೆ ಸಿದ್ಧವಾಗಿರುವ ವಧು, ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ಟ್ರಾಕ್ಟರ್ ಮೇಲೆ ಬಂದಿದ್ದಾಳೆ.
ಮದುವೆ (Marriage) ಅಂದರೆ ಸಂಭ್ರಮ, ಸಡಗರ. ದಾಂಪತ್ಯ ಜೀವನಕ್ಕೆ ಕಾಲಿಡಲು ಎರಡು ಮೂರು ತಿಂಗಳಿನಿಂದಲೇ ತಯಾರಿಗಳು ನಡೆಯುತ್ತವೆ. ಮದುವೆ ಹೀಗೆ ಆಗಬೇಕು, ಹಾಗೆ ನಡೆಯಬೇಕು ಅಂತ ಮಧು- ವರ ಕನಸು ಕಂಡಿರುತ್ತಾರೆ. ಅದರಲ್ಲೂ ಕೆಲವರು ಕಲ್ಯಾಣ ಮಂಟಪಕ್ಕೆ (Marriage Hall) ಎಂಟ್ರಿ ಕೊಡುವ ಬಗ್ಗೆ ಚರ್ಚೆಗಳನ್ನ ಮಾಡಿರುತ್ತಾರೆ. ಬೇರೆ- ಬೇರೆ ರೀತಿಯಲ್ಲಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡುವ ದೃಶ್ಯಗಳು ಸಾಮಾನ್ಯವಾಗಿ ವೈರಲ್ (Viral) ಆಗುತ್ತವೆ. ಅದೇ ರೀತಿ ಇದೊಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಧ್ಯಪ್ರದೇಶದ ಬೇತುಲ್ನಲ್ಲಿ ನಡೆದ ಮದುವೆಗೆ ವಧು ಗ್ರ್ಯಾಂಡ್ ಆಗಿ ಟ್ರಾಕ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾಳೆ. ಕೆಂಪು ಬಣ್ಣದ ಬಟ್ಟೆ ಧರಿಸಿ ಮದುವೆಗೆ ಸಿದ್ಧವಾಗಿರುವ ವಧು, ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ಟ್ರಾಕ್ಟರ್ ಮೇಲೆ ಬಂದಿದ್ದಾಳೆ. ಆಕೆಯೇ ಟ್ರಾಕ್ಟರ್ ಚಾಲನೆ ಮಾಡಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು ವಿಶೇಷವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Watch: Bride Comes Driving Tractor To Wedding Venue In Madhya Pradesh https://t.co/TTmIUQPL6X via @ndtv
— Anurag Dwary (@Anurag_Dwary) May 27, 2022
ವಧು ಮತ್ತು ವರ ತಮ್ಮ ಮದುವೆಗೆ ಸಹಜವಾಗಿ ಕಾರು ಅಥವಾ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಆದರೆ ಈ ಪ್ರವೃತ್ತಿ ಹಳೆಯದಾಗಿದೆ. ಅದರಲ್ಲೂ ವಧು ತೀರಾ ವಿಭಿನ್ನವಾಗಿ ಎಂಟ್ರಿ ಕೊಡುತ್ತಾರೆ. ಈ ಹಿಂದೆ ವಧುವೊಬ್ಬರು ಬುಲೆಟ್ ಬೈಕ್ನಲ್ಲಿ ರಾಯಲ್ ಆಗಿ ಪ್ರವೇಶ ನೀಡಿದ್ದರು. ಅದೇ ರೀತಿ ಇದೀಗ ಮಧ್ಯಪ್ರದೇಶದಲ್ಲಿ ಟ್ರಾಕ್ಟರ್ ಮೂಲಕ ಮದುವೆಗೆ ಬಂದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮದುಮಗಳ ಎಡ, ಬಲಕ್ಕೆ ಆಕೆಯ ಸಹೋದರರು ನಿಂತಿದ್ದಾರೆ.