ಮದುವೆಗೆ ದುನಿಯಾ ವಿಜಯ್​ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದ ಯುವತಿ | I will Marry if Duniya Vijay Attend The arrange the marriage Says His Fan

ನಟ ದುನಿಯಾ ವಿಜಯ್​ ಅವರು ಮದುವೆಗೆ ಬಂದು ಆಶೀರ್ವಾದ ಮಾಡದಿದ್ದರೆ ತಾಳಿಯೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿ ಪಟ್ಟು ಹಿಡಿದಿರುವ ಘಟನೆ ನಡೆದಿದೆ. ದಾವಣಗೆರೆಯ ರಾಮನಗರದ ಯುವತಿ ಅನುಷಾ ಹಾಗೂ ಅವರ ತಂದೆ ದುನಿಯಾ ವಿಜಯ್​ ಅವರ ದೊಡ್ಡ ಅಭಿಮಾನಿ. ಮನೆ ಕಟ್ಟಿಸಿದಾಗ ದುನಿಯಾ ವಿಜಯ್ ಅವರಿಂದಲೇ ಅನುಷಾ ತಂದೆ ಶಿವಾನಂದ ಮನೆ ಗೃಹಪ್ರವೇಶ ಮಾಡಿಸಿದ್ದರು. ಮನೆಗೆ ‘ದುನಿಯಾ ಋಣ’ ಎಂದು ಹೆಸರಿಡಲಾಗಿದೆ. ಈಗ ಮದುವೆಗೆ ವಿಜಯ್ ಆಗಮಿಸಬೇಕು ಎಂದು ಅನುಷಾ ಕುಟುಂಬದವರು ಪಟ್ಟು ಹಿಡಿದಿದ್ದಾರೆ. ದುನಿಯಾ ವಿಜಯ್​ ಕಂಡರೆ ಅನುಷಾಗೆ ಬಹಳ ಅಭಿಮಾನ. ಈ ಕಾರಣಕ್ಕೆ ಅವರು ಒಂಟಿ ಸಲಗ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದೇ 29ಕ್ಕೆ ದಾವಣಗೆರೆಯಲ್ಲಿ ಅನುಷಾ ಮದುವೆ ಕಾರ್ಯಕ್ರಮ ನಡೆಯಲಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅನುಷಾ ಅಭಿಮಾನ ಕಂಡು ಅನೇಕರು ಅಚ್ಚರಿ ಹೊರ ಹಾಕಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

TV9 Kannada

Leave a comment

Your email address will not be published. Required fields are marked *