ಹಾವೇರಿ: ಮದುವೆಗೆ ಮನೆಯವರು ವಿರೋಧಿಸಿದ ಕಾರಣ ಪ್ರೇಮಿಗಳಿಬ್ಬರು ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ. ಇರ್ಷಾದ್​ ಕುಡುಚಿ (22)ವಿದ್ಯಾಗಾಳಿ (21)ಮೃತ ಪ್ರೇಮಿಗಳು.

ಅದೇ ಗ್ರಾಮದ ನಿವಾಸಿಗಳಾಗಿದ್ದ ಇಬ್ಬರೂ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಗೆ ಮನೆಯವರು ವಿರೋಧಿಸಿದ ಕಾರಣ ಕಳೆದೆರಡು ದಿನಗಳಿಂದ ಇಬ್ಬರೂ ನಾಪತ್ತೆಯಾಗಿದ್ದರು ಎನ್ನಲಾಗಿದೆ. ತಡರಾತ್ರಿ ಇಬ್ಬರೂ ಜಮೀನಿನ ಬಳಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಜಮೀನಿನ ಬಳಿ ಬಂದ ಸಾರ್ವಜನಿಕರಿಂದ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹಾವೇರಿ ಪೋಲಿಸರು ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಮದುವೆಗೆ ಮನೆಯವರ ವಿರೋಧ ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ appeared first on News First Kannada.

Source: News First Kannada
Read More